ಜಿಲ್ಲೆ

ಜಾತಿ ಜನಗಣತಿ ವಿಚಾರ ರಾಜ್ಯ ಸರ್ಕಾಕ್ಕೆ ಬಿಟ್ಟ ವಿಚಾರ : ಮಲ್ಲಿಕಾರ್ಜುನ ಖರ್ಗೆ

ಕಲಬುರ್ಗಿ : ಜಾತಿ ಜನಗಣತಿ ವಿಚಾರ ರಾಜ್ಯ ಸರ್ಕಾಕ್ಕೆ ಬಿಟ್ಟ ವಿಚಾರ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಕಲಬುರಗಿಯಲ್ಲಿ ಹೇಳಿಕೆ ನೀಡಿದ್ದಾರೆ..ರಾಜ್ಯದಲ್ಲಿ ಜಾತಿ ಜನಗಣತಿ ಜಟಾಪಟಿ ಜೋರಾಗಿದೆ. ಜಾತಿ ಜನಗಣತಿಗೆ ರಾಜ್ಯದ ಪ್ರಬಲ ಸಮುದಾಯಗಳಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ..

ಜಾತಿ ಗಣತಿ ರಾಜ್ಯ ಸರ್ಕಾರಕ್ಕೆ ಬಿಟ್ಟ ವಿಚಾರ ಆ ರಿಪೋರ್ಟ್ ಕೂಡ ನಾನು ನೋಡಿಲ್ಲ ರಾಜ್ಯ ಸರ್ಕಾರ ಕ್ಯಾಬಿನೆಟ್​ನಲ್ಲಿ ಚರ್ಚಿಸಿ ಏನು ತೀರ್ಮಾನ ಕೈಗೊಳ್ಳುತ್ತೋ ನೋಡೋಣ, ಅದು ರಾಜ್ಯ ಸರಕಾರಕ್ಕೆ ಬಿಟ್ಟ ವಿಚಾರ. ಇದರ ಕುರಿತಾಗಿ ಮಾಹಿತಿ ನನಗೆ ಇಲ್ಲ, ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ..

ಸರ್ಕಾರದ ಜಾತಿ ಜನಗಣತಿಗೆ ಲಿಂಗಾಯತ ಮಠಾದೀಶರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಲಿಂಗಾಯತ ಸಚಿವರು ,ಶಾಸಕರು ರಾಜೀನಾಮೆ ನೀಡಿ ಎಂದು ಜಯಮೃತ್ಯುಂಜಯ ಸ್ವಾಮೀಜಿ ಕರೆ ಕೊಟ್ಟಿದ್ದಾರೆ..ಜಾತಿ ಜನಗಣತಿ ಅಸಮರ್ಪಕವಾಗಿದೆ ಎಂದು ತೋಂಟದಾರ್ಯ ಶ್ರೀಗಳು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ..

Comments (0)

Your email address will not be published. Required fields are marked *

Back to top button