ರಾಜಕೀಯ

ಪರಿಷತ್​​​ ಸ್ಥಾನ ತುಂಬುವ ಬಗ್ಗೆ ಹೈಕಮಾಂಡ್​ ಜೊತೆ ಚರ್ಚೆ; ಡಿಸಿಎಂ ಡಿಕೆಶಿ

ಹುಬ್ಬಳ್ಳಿ: ಸಂಪುಟ ಪುನರ್ ರಚನೆಯ ವಿಚಾರವಾಗಿ ಯಾರೋ ಸುಳ್ಳು ಸುದ್ದಿ ಹರಿಬಿಟ್ಟಿದ್ದಾರೆ. ಅದು ಸತ್ಯಕ್ಕೆ ದೂರವಾದದು. ಆದರೆ, ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳು ಖಾಲಿ ಇವೆ. ಅವುಗಳ ನಾಮನಿರ್ದೇಶನ ಬಗ್ಗೆ ಹೈಕಮಾಂಡ್​ ಜೊತೆ ಚರ್ಚಿಸಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಂಪುಟ ಪುನರ್ ರಚನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿವೇಚನೆಗೆ ಬಿಟ್ಟಿದ್ದು, ಅದಕ್ಕೂ ಹೈ ಕಮಾಂಡ್ ಸೂಚನೆ ನೀಡಬೇಕು ಎಂದು ಸ್ಪಷ್ಟಪಡಿಸಿದರು.
ಶಾಸಕ ಬಸನಗೌಡ ಯತ್ನಾಳ ಕಾಂಗ್ರೆಸ್ ಸೇರ್ಪಡೆಯ ವಿಚಾರವಾಗಿ ಮಾತನಾಡಿದ ಅವರು, ಅದು ಕೇವಲ ವದಂತಿ. ಬೇರೆ ಪಕ್ಷದವರ ವಿಚಾರ ನಮಗ್ಯಾಕೆ. ಅವರುಂಟು ಅವರ ಪಕ್ಷ ಉಂಟು ಎಂದು ಪ್ರತಿಕ್ರಿಯಿಸಿದರು. ವಕ್ಫ್ ಬೋರ್ಡ್ ಮಸೂದೆ ತಿದ್ದುಪಡಿ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸದೇ ಡಿಕೆಶಿ ತೆರಳಿದರು.

Comments (0)

Your email address will not be published. Required fields are marked *

Back to top button