ರಾಜ್ಯಸುದ್ದಿ

ಮ್ಯಾರಾಥಾನ್ ಓಟಕ್ಕೆ ಐಜಿಪಿ ಬಿ.ಆರ್.ರವಿಕಾಂತೇಗೌಡ ಚಾಲನೆ

ದಾವಣಗೆರೆ: ಮಂಜು ಮುಸುಕಿನೊಳಗೆ 5KM ಮತ್ತು 10KM ಮ್ಯಾರಥಾನ್ ಓಟದಲ್ಲಿ ಪೊಲೀಸರೊಂದಿಗೆ ನಾಗರಿಕರು ಅತ್ಯುತ್ಸಾಹದಲ್ಲಿ ಭಾಗವಹಿಸಿದ್ದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಜಿಲ್ಲಾ ಪೊಲೀಸ್ ವತಿಯಿಂದ ಎರಡನೇ ಬಾರಿಗೆ ‘ಪೊಲೀಸರೊಂದಿಗೆ ಓಟ’ 5ಕೆ ಮತ್ತು 10ಕೆ ಮ್ಯಾರಥಾನ್ ಓಟದ ಸ್ಪರ್ಧೆಗೆ ದಾವಣಗೆರೆ ಪೂರ್ವ ವಲಯ ಮಹಾನಿರೀಕ್ಷಕ ಡಾ.ಬಿ.ಆರ್.ರವಿಕಾಂತೇಗೌಡ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಎಸ್ಪಿ ಉಮಾ ಪ್ರಶಾಂತ್, ಹೆಚ್ಚುವರಿ ಎಸ್ಪಿಗಳಾದ ವಿಜಯಕುಮಾರ್ ಸಂತೋಷ್, ಜಿ.ಮಂಜುನಾಥ್, ಡಿವೈಎಸ್ಪಿಗಳಾದ ಶರಣ ಬಸವೇಶ್ವರ ಬೀಮರಾವ್, ಬಸವರಾಜ್, ಪ್ರಕಾಶ್ ಇದ್ದರು. ನಂತರ ಪೊಲೀಸರೊಂದಿಗೆ ನಾಗರಿಕರು ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡಿದ್ದರು.

Comments (0)

Your email address will not be published. Required fields are marked *

Back to top button