ರಾಜಕೀಯ
ಯಾರಾಗ್ತಾರೆ ದೆಹಲಿ ಸಿಎಂ? ಇಂದು ಬಿಜೆಪಿ ಹೈವೋಲ್ಟೆಜ್ ಮೀಟಿಂಗ್..

ನವದೆಹಲಿ: ಬಿಜೆಪಿ ಪಕ್ಷದ ಶಾಸಕಾಂಗ ಸಭೆ ಇಂದು ಸಂಜೆ 7 ಗಂಟೆಗೆ ಪ್ರಾರಂಭವಾಗಲಿದೆ. ಈ ವೇಳೆ ನೂತನ ದೆಹಲಿ ಮುಖ್ಯಮಂತ್ರಿ ಆಯ್ಕೆ ಮಾಡಲಿದ್ದಾರೆ. ಈ ಸಂಬಂಧ ಹೊಸದಾಗಿ ಆಯ್ಕೆಯಾದ 48 ಶಾಸಕರನ್ನು ಸಂಜೆ 6 ಗಂಟೆಗೆ ದೆಹಲಿ ಪಂಡಿತ್ ಪಂತ್ ಮಾರ್ಗದಲ್ಲಿರುವ ದೆಹಲಿ ಬಿಜೆಪಿ ಕಚೇರಿಯಲ್ಲಿ ಸೇರಲು ತಿಳಿಸಲಾಗಿದೆ.
ಶಾಸಕಾಂಗ ಸಭೆ ಸಂಜೆ 6.30 ರಿಂದ 7ರ ವರೆಗೆ ನಡೆಯಲಿದೆ. ಈ ಸಭೆಗೆ ಹಿರಿಯ ಮುಖಂಡರು ವೀಕ್ಷಕರಾಗಿ ಬರಲಿದ್ದಾರೆ. ಶಾಸಕರ ಅಭಿಪ್ರಾಯ ಪಡೆದ ಬಳಿಕ ದೆಹಲಿ ನೂತನ ಸಿಎಂ ಹೆಸರನ್ನು ಬಿಜೆಪಿ ಹೈ ಕಮಾಂಡ್ ನಾಯಕರು ಘೋಷಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ




