ರಾಜಕೀಯ

ಮಹಾಕುಂಭವನ್ನು ಮೃತ್ಯುಕುಂಭ ಎಂದ ದೀದಿ

ಪಶ್ಚಿಮ ಬಂಗಾಳ: ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭವನ್ನು ಮೃತ್ಯು ಕುಂಭ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಮತ್ತೊಂದು ವಿವಾದ ಹುಟ್ಟು ಹಾಕಿದ್ದಾರೆ. ಪ್ರಯಾಗ್‌ರಾಜ್‌ನಲ್ಲಿ 144 ವರ್ಷಗಳ ನಂತರ ನಡೆಯುತ್ತಿರುವ ಮಹಾಕುಂಭದಲ್ಲಿ ನಡೆದ ಕಾಲ್ತುಳಿತ ಮತ್ತು ಜನಸಂದಣಿಯ ಅಸಮರ್ಪಕ ನಿರ್ವಹಣೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮಂಗಳವಾರ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಈ ವೇಳೆ ವಿಶ್ವದ ಅತಿ ದೊಡ್ಡ ಧಾರ್ಮಿಕ ಸಭೆಯನ್ನು “ಮೃತ್ಯು ಕುಂಭ” ಎಂದು ಕರೆದಿದ್ದು, ಇದೀಗ ವಿವಾದಕ್ಕೆ ಗುರಿಯಾಗಿದೆ.

ಪಶ್ಚಿಮ ಬಂಗಾಳದ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ  ಮಾತನಾಡಿದ ಅವರು, ಇದು “ಮಹಾಕುಂಭವಲ್ಲ, ಮೃತ್ಯು ಕುಂಭ” ಎನ್ನುವ ಮೂಲಕ ವಿವಾದ ಸೆಲೆಯನ್ನು ಸೃಷ್ಠಿಸಿದ್ದಾರೆ. ಮುಂದುವರೆದು ಮಾತನಾಡಿರುವ ಅವರು, ನಾನು ಮಹಾ ಕುಂಭವನ್ನು ಗೌರವಿಸುತ್ತೇನೆ, ಪವಿತ್ರ ಗಂಗಾ ಮಾತೆಯನ್ನು ಗೌರವಿಸುತ್ತೇನೆ. ಆದರೆ ಉತ್ತರ ಪ್ರದೇಶ ಸರ್ಕಾರ ಸರಿಯಾದ ಯೋಜನೆ ಇಲ್ಲದೆ ಮಹಾಕುಂಭವನ್ನು ಆಯೋಜಿಸಿದ್ದಾರೆ. ಇನ್ನು ಈ ಯೋಜನೆಗೆ ಶ್ರೀಮಂತರು, ವಿಐಪಿಗಳಿಗೆ, 1 ಲಕ್ಷ ರೂ.ಗಳಷ್ಟು ಹೆಚ್ಚಿನ ಬೆಲೆಗೆ ಶಿಬಿರಗಳನ್ನು (ಟೆಂಟ್‌ಗಳು) ಪಡೆಯಲು ವ್ಯವಸ್ಥೆಗಳು ಲಭ್ಯವಿದೆ. ಆದರೆ ಬಡವರಿಗೆ, ಯಾವುದೇ ಸರಿಯಾದ ವ್ಯವಸ್ಥೆ ಇಲ್ಲ ಎಂದು ಟೀಕೆ ಮಾಡಿದ್ದರೆ.

Comments (0)

Your email address will not be published. Required fields are marked *

Back to top button