ಕ್ರೈಂ ಸ್ಟೋರಿರಾಜ್ಯ

ಬೈಕ್ ಗಳ ನಡೆವೆ ಅಪಘಾತ; ಓರ್ವ ವ್ಯಕ್ತಿ ಸಾವು

ಉಡುಪಿ: ಅಜ್ಜರಕಾಡು ಅಗ್ನಿಶಾಮಕ ಇಲಾಖೆ ಹತ್ತಿರ ಬೈಕ್ ಗಳ ನಡುವೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಓರ್ವ ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ.
ಮೃತ ವ್ಯಕ್ತಿಯನ್ನು ಇಲ್ಲಿನ ಮಿಷನ್ ಆಸ್ಪತ್ರೆ ಬಳಿಯ ನಿವಾಸಿ ಸ್ಯಾಮುವೆಲ್ ಸದಾನಂದ ಕರ್ಕಡ (59) ಎಂದು ಗುರುತಿಸಲಾಗಿದೆ. ಮತ್ತೋರ್ವ ದ್ವಿಚಕ್ರ ಸವಾರ ಗಂಭೀರ ಸ್ಥಿತಿಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.  ಫೆ. 17ರಂದು ರಾತ್ರಿ ಅಗ್ನಿಶಾಮಕ ಇಲಾಖೆ ಮುಂಭಾಗದಲ್ಲಿ ಘಟನೆ ನಡೆದಿದ್ದು,ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments (0)

Your email address will not be published. Required fields are marked *

Back to top button