#Exclusive NewsTop Newsಜಿಲ್ಲೆರಾಜ್ಯಸುದ್ದಿ

 ಧಾರವಾಡ : ಪುಡಾರಿಗಳಿಗೆ ಬಿಸಿ ಮುಟ್ಟಿಸಿದ ಪೊಲೀಸರು..!

ಧಾರವಾಡ : ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕೋ ನಿಟ್ಟಿನಲ್ಲಿ, ಪಬ್ಲಿಕ್ ಪ್ರೆಂಡ್ಲಿ ಪೊಲೀಸ್ ವಾತಾವರಣ ಸೃಷ್ಠಿಸುವ ಜತೆಗೆ ಪುಡಾರಿಗಳಿಗೆ ಬಿಸಿ ಮುಟ್ಟಿಸಿದ ಪೊಲೀಸರು.

ನಗರದ ಮಾನಸಿಕ ಆಸ್ಪತ್ರೆಯ ಬಳಿ ಉಪನಗರ ಪೊಲೀಸ್ ಠಾಣೆಯಿಂದ ಬೈಕ್ ಏರಿದ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಶಶಿಕುಮಾರವರು, ಠಾಣೆ ವ್ಯಾಪ್ತಿಯ ಸಪ್ತಾಪುರ ಸೇರಿ ಪ್ರಮುಖ ಜನನಿಬಿಡ ಪ್ರದೇಶ ಸೇರಿ ಹಲವು ವೃತಗಳಲ್ಲಿ ಭೇಟಿ ನೀಡಿದರು. ಈ ವೇಳೆ ಕಮಿಷನರ್ ಅವರಿಗೆ ಉಪನಗರ ಠಾಣೆಯ ಇನ್ಸ್ಪೆಕ್ಟರ್ ಸೇರಿ ಸಿಬ್ಬಂದಿಗಳು ಸಾಥ್ ನೀಡಿದ್ದು, ಕಾನೂನು ಉಲ್ಲಂಘನೆ ಮಾಡುವವರಿಗೆ ಹಾಗೂ ನೈಟ್ ತಿರುಗಾಡುವ ಪುಡಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಇನ್ನೂ ಈ ವೇಳೆ ಸಾರ್ವಜನಿಕರೊಂದಿಗೆ ಸಭೆ ಮಾಡಿ ಸಮಸ್ಯೆಗಳನ್ನು ಆಲಿಸಿ, ರಾತ್ರಿ ವೇಳೆ ಸೇರಿದಂತೆ ಮನೆಯಿಂದ ಹೊರಗಡೆ ಹೋಗುವ ವೇಳೆ ಎಚ್ಚರಿಕೆ ಇರಬೇಕು, ಮನೆಗಳಿಗೆ ಸಿಸಿಟಿವಿ ಹಾಕಿಸಲು ತಿಳಿಸಿದರು.‌ ಯಾರಾದರೂ ಅನುಮಾನಸ್ಪದ ವ್ಯಕ್ತಿ ಘಟನೆಗಳು ಕಂಡುಬಂದಲ್ಲಿ‌112 ಸಹಾಯವಾಣಿಗೆ ಕರೆ ಮಾಡುವ ಕುರಿತು ತಿಳುವಳಿಕೆ ನೀಡಿದರು.

Comments (0)

Your email address will not be published. Required fields are marked *

Back to top button