#Exclusive NewsTop Newsಜಿಲ್ಲೆಸುದ್ದಿ
ಗದಗ : KSRTC ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ

ಗದಗ : ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರನ ಕಾಲು ಕಟ್ ಆಗಿರುವ ಭಯಾನಕ ದೃಶ್ಯ ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಕೋರ್ಟ್ ಸರ್ಕಲ್ ಬಳಿ ನಡೆದಿದೆ. KSRTC ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದ ನಿವಾಸಿಯಾದ ಬೈಕ್ ಸವಾರ ಗವಿಸಿದ್ದಪ್ಪ ಬನ್ನಿಕೊಪ್ಪ ಎಂಬವವರ ಕಾಲು ಕಟ್ ಆಗಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೈಕ್ ಸವಾರ ಮುಂಡರಗಿಯಿಂದ ಹಿರೇವಡ್ಡಟ್ಟಿ ಗ್ರಾಮಕ್ಕೆ ತೆರಳುತ್ತಿದ್ದರು. ಇದೇ ವೇಳೆ ಗದಗನಿಂದ ಮುಂಡರಗಿ ಪಟ್ಟಣಕ್ಕೆ ಬರುತ್ತಿದ್ದ ಸಾರಿಗೆ ಬಸ್ ನಡುವೆ ಡಿಕ್ಕಿ ಸಂಭವಿಸಿ ದುರ್ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಪಘಾತದಲ್ಲಿ ಕಾಲು ಕಟ್ ಆಗಿದ್ದನ್ನು ನೋಡಿದ ಬೈಕ್ ಸವಾರ ಕಂಗಾಲಾಗಿದ್ದಾನೆ.




