#Exclusive NewsTop Newsರಾಜಕೀಯರಾಜ್ಯಸುದ್ದಿ

ಮುಡಾ ಕೇಸ್​ : ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ ಬಿಗ್​ ರಿಲೀಫ್​..!

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಾಗೂ ನಗರಾಭಿವೃದ್ದಿ ಸಚಿವರಾದ ಭೈರತಿ ಸುರೇಶ್​ಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.ಮುಡಾ ಸೈಟ್ ಹಗರಣ ವಿಚಾರಣೆ ಸಂಬಂಧ ಇಡಿ ಸಮನ್ಸ್ ಗೆ ಹೈಕೋರ್ಟ್ ತಡೆ ನೀಡಿದೆ.

ಮುಂದಿನ ವಿಚಾರಣೆವರಿಗೆ ಸಿಎಂ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್ ವಿಚಾರಣೆಗೆ ಹಾಜರಾಗುವಂತಿಲ್ಲ. ಜನವರಿ 28 ರಂದು ಇಡಿ ಅಧಿಕಾರಿಗಳು ಸಿಎಂ ಪತ್ನಿ ಪಾರ್ವತಿ ಹಾಗೂ ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್ ಗೆ ವಿಚಾರಣೆ ಗೆ ಹಾಜರಾಗುವಂತೆ ಸೂಚನೆ ನೀಡಿತ್ತು.ಹೈಕೋರ್ಟ್ ವಿಚಾರಣೆಗೆ ತಡೆ ನೀಡಿದ್ದು, ಫೆ.10 ವರಿಗೆ ಇಡಿ ಮುಂದೆ ಸಿಎಂ ಪತ್ನಿ ಪಾರ್ವತಿ ಹಾಗೂ ಭೈರತಿ ಸುರೇಶ್ ಹಾಜಾರಾಗುವಂತಿಲ್ಲ. ಸದ್ಯಕ್ಕೆ ಭೈರತಿ ಸುರೇಶ್ ಹಾಗೂ ಪಾರ್ವತಿಗೆ ಅವರಿಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ.

ನ್ಯಾ ,ಎಂ.ನಾಗಪ್ರಸನ್ನ ಅವರ ಆದೇಶದಿಂದ ಪಾರ್ವತಿ ಹಾಗೂ ಭೈರತಿ ಸುರೇಶ್ ನಿಟ್ಟಿಸಿರು ಬಿಟ್ಟಿದ್ದಾರೆ. ಕೆಲ ದಿನಗಳ ಹಿಂದೆ ಇಡಿ ಅಧಿಕಾರಿಗಳು ಪಾರ್ವತಿ ಹಾಗೂ ಭೈರತಿ ಸುರೇಶ್ ಗೆ ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ನೀಡಿತ್ತು. ಆದ್ರೆ ಇದೀಗ ಇಡಿ ನೋಟಿಸ್ ಗೆ ಹೈಕೋರ್ಟ್ ತಡೆ ನೀಡಿದೆ.

Comments (0)

Your email address will not be published. Required fields are marked *

Back to top button