#Exclusive NewsTop Newsಜಿಲ್ಲೆಸುದ್ದಿ

 ಬೆಳಗಾವಿ : ವೈದ್ಯರ ನಿರ್ಲಕ್ಷದಿಂದ ಮೂರು ವರ್ಷದ ಬಾಲಕಿ ಸಾವು

 ಬೆಳಗಾವಿ : ಕೆಮ್ಮು, ನೆಗಡಿಯಿಂದ ಬಳಲುತ್ತಿದ್ದ ಮೂರು ವರ್ಷದ ಬಾಲಕಿ ಸಾವನ್ನಪ್ಪಿದ್ದು, ವೈದ್ಯರ ನಿರ್ಲಕ್ಷವೇ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಘಟನೆ ಸಂಭವಿಸಿದೆ.

ಖುಷಿ ಖೋತ (3) ಸಾವನ್ನಪ್ಪಿರುವ ಬಾಲಕಿ. ಚಿಕ್ಕೋಡಿ ಪಟ್ಟಣದ ಜಾರಿ ಗಲ್ಲಿಯಲ್ಲಿರುವ ಗಣಿ ಆಸ್ಪತ್ರೆ‌ಯಲ್ಲಿ ಬಾಹುಬಲಿ ಗಣಿ ಎಂಬ ವೈದ್ಯನಿಂದ ಅಚಾತುರ್ಯ ನಡೆದಿದೆ.ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ ನೀಡಿರುವ ವೈದ್ಯ ಬಳಿಕ  ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ.ಆ್ಯಂಬುಲೆನ್ಸ್ ಬರುತ್ತೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಹೇಳಿ ವೇಟ್ ಮಾಡಿ ಎಂದು ಪೋಷಕರಿಗೆ ತಿಳಿಸಿದ್ದ ವೈದ್ಯ ಗಣಿ.

ಬಳಿಕ ಬಾಲಕಿ ಮೃತಪಟ್ಟಿರುವುದಾಗಿ ಪೋಷಕರಿಗೆ ತಿಳಿಸಲಾಗಿದೆ.ಬಾಹುಬಲಿ ಗಣಿಯ ನಿರ್ಲಕ್ಷ್ಯದಿಂದಾಗಿ ನಮ್ಮ ಮಗು ಸಾವನ್ನಪ್ಪಿರುವುದಾಗಿ ಆರೋಪಿಸುತ್ತಿರುವ ಮೃತ ಬಾಲಕಿಯ ಪೋಷಕರು.ಘಟನೆ ಬಳಿಕ ಆಸ್ಪತ್ರೆಯಿಂದ ಓಡಿ ಹೋಗಿರುವ ವೈದ್ಯ ಬಾಹುಬಲಿ ಗಣಿ. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ‌.

 

Comments (0)

Your email address will not be published. Required fields are marked *

Back to top button