#Exclusive NewsTop Newsರಾಜಕೀಯರಾಜ್ಯಸುದ್ದಿ

ಡಿ.ಕೆ. ಶಿವಕುಮಾರ್ ಸಿಎಂ ಆಗ್ತಾರೆ ; ಜೈನಮುನಿ

ಬೆಳಗಾವಿ : ಒಂದೆಡೆ ಅದ್ಧೂರಿಯಾಗಿ ಕಾಂಗ್ರೆಸ್ ಸಮಾವೇಶ ನಡೆಯುತ್ತಿದ್ದರೆ ಮತ್ತೊಂದೆಡೆ, ಮುಂದಿನ ಸಿಎಂ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಹೈಕಮಾಂಡ್ ನಾಯಕರಿದ್ದ ಕಾರ್ಯಕ್ರಮದಲ್ಲಿಯೇ ಕಾಂಗ್ರೆಸ್ ಕಾರ್ಯಕರ್ತರು ಮುಂದಿನ ಸಿಎಂ ಡಿಕೆ ಶಿವಕುಮಾರ್ ಎಂದು ಘೋಷಣೆ ಕೂಗಿದ್ದಾರೆ. ಡಿಕೆ ಶಿವಕುಮಾರ್ ಫೋಟೋ ಹಿಡಿದ ಬೆಂಬಲಿಗರು ಕಾರ್ಯಕರ್ಮದಲ್ಲಿ ಘೋಷಣೆ ಮೊಳಗಿಸಿದ್ದಾರೆ.

ಡಿ.ಕೆ. ಶಿವಕುಮಾರ್ ಸಿಎಂ ಆಗ್ತಾರೆ ; ಜೈನಮುನಿ

ಶ್ರೀಯು ಗುಣಧರನಂದಿ ಮಹಾರಾಜರು ಬರುವ ದಿನಗಳಲ್ಲಿ ಡಿಕೆಶಿ ಮುಖ್ಯಮಂತ್ರಿಯಾಗುವ ಬಗ್ಗೆ ಭವಿಷ್ಯ ನುಡಿದ್ದಾರೆ. ಡಿಕೆಶಿ ಈ ಆಸೆಯಿಂದ ಸಂತಸ ಪಟ್ಟಿದ್ದಾರಾದರೂ, ನೀವು ಹೀಗೆ ಆಶೀರ್ವಾದಿಸಿದಾಗಲೆಲ್ಲಾ ನನಗೆ ಪೆಟ್ಟು ಬಿದ್ದಿದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಜೊತೆಗೆ, ಶ್ರೀಗಳು ಇದೇ ಕಾರ್ಯಕ್ರಮದಲ್ಲಿ ಜೈನ ನಿಗಮ ಸ್ಥಾಪಿಸುವಂತೆ ಮನವಿ ಸಲ್ಲಿಸಿದ್ದು, ಅದಕ್ಕೆ ಸ್ಪಂದಿಸಿದ ಡಿಕೆಶಿ, ಜೈನ ನಿಗಮ ಸ್ಥಾಪನೆಯ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಹೈಕಮಾಂಡ್ ವಾರ್ನಿಂಗ್, ಖರ್ಗೆ ಸೂಚನೆ ಬಳಿಕವೂ ಬೆಳಗಾವಿ ಸಮಾವೇಶದಲ್ಲೂ ಮುಂದಿನ ಸಿಎಂ ಕೂಗು ಮೊಳಗಿದೆ. ಇದಕ್ಕೆ ಹೈಕಮಾಂಡ್ ಯಾವ ರೀತಿ ಪ್ರತಿಕ್ರಿಯಿಸುತ್ತದೆಯೋ ಕಾದು ನೋಡಬೇಕಿದೆ.

Comments (0)

Your email address will not be published. Required fields are marked *

Back to top button