Top Newsರಾಜ್ಯಸಿನಿಮಾಸುದ್ದಿ

ಸ್ವಿಮ್ ಸೂಟ್‌ ಧರಿಸಿ ಈಜುಕೊಳಕ್ಕಿಳಿದ ಚೈತ್ರಾ ಆಚಾರ್ : ವಿವಿಧ ಭಂಗಿಯ ಫೋಟೋ ವೈರಲ್

ಕನ್ನಡದ ‘ಟೋಬಿ’ ನಟಿ ಚೈತ್ರಾ ಆಚಾರ್‌ ಸದಾ ಒಂದಲ್ಲಾ ಒಂದು ಫೋಟೋಶೂಟ್ ಮಾಡಿಸುತ್ತಲೇ ಇರುತ್ತಾರೆ. ಟೀಕೆ ಮಾಡುವವರಿಗೆ ಕೇರ್ ಮಾಡದೇ ಮತ್ತೊಮ್ಮೆ ಹಾಟ್ ಆಗಿ ನಟಿ ಕಾಣಿಸಿಕೊಂಡಿದ್ದಾರೆ. ಮಸ್ತ್ ಫೋಟೋಶೂಟ್‌ವೊಂದನ್ನು ನಟಿ ಶೇರ್ ಮಾಡಿದ್ದಾರೆ.

ಮಹೀರಾ, ಟೋಬಿ, ಗಿಲ್ಕಿ, ತಲೆದಂಡ, ಬ್ಲಿಂಕ್ ಚಿತ್ರಗಳ ಮೂಲಕ ಕನ್ನಡಿಗರ ಹೃದಯವನ್ನು ಗೆದ್ದ ಚೈತ್ರಾ ಆಚಾರ್ ಸದ್ಯ ಈಜುಕೋಳಕ್ಕೆ ಇಳಿದಿದ್ದಾರೆ. ಮಾದಕ ಫೋಸ್ ನೀಡಿದ್ದಾರೆ. ಸದ್ಯ ಚೈತ್ರಾ ಅವರ ಈ ಲುಕ್ ಅನೇಕರಿಗೆ ಕಿಕ್ ನೀಡುತ್ತಿದೆ. ಕಣ್ಮನವನ್ನು ಸೆಳೆಯುತ್ತಿವೆ.

ಇನ್ನು ಸಾಮಾನ್ಯವಾಗಿ ಚೈತ್ರಾ ಆಚಾರ್ ತಮ್ಮ ಫೋಟೊಗಳನ್ನು ಹಂಚಿಕೊಂಡಾಗೆಲ್ಲ ಒಂದು ವರ್ಗ ತಕರಾರು ತೆಗೆಯುತ್ತೆ. ಸಂಸ್ಕಾರ-ಸಂಪ್ರದಾಯದ ಬಗ್ಗೆ ಚೈತ್ರಾಗೆ ಉಪದೇಶವನ್ನು ನೀಡುತ್ತೆ. ಟ್ರೋಲ್‌ ಕೂಡ ಮಾಡುತ್ತೆ. ಆದರೆ, ಇದ್ಯಾವುದಕ್ಕೂ ಚೈತ್ರಾ ಇಲ್ಲಿಯವರೆಗೆ ತಲೆ ಕೆಡಿಸಿಕೊಂಡಿರಲಿಲ್ಲ. ಆದರೂ ಅದ್ಯಾಕೋ ಈ ಬಾರಿ ಪಡ್ಡೆಗಳ ಹೃದಯಕ್ಕೆ ಕಿಚ್ಚು ಹಚ್ಚುವ ಫೋಟೊಗಳನ್ನು ಹಂಚಿಕೊಂಡಿರುವ ಚೈತ್ರಾ ಕಾಮೆಂಟ್ ಸೆಕ್ಷನ್‌ನ ಆಫ್ ಮಾಡಿದ್ದಾರೆ.

ಅಂದಹಾಗೆ, ಕನ್ನಡದ ಜೊತೆ ತಮಿಳಿನ ನಟ ಸಿದ್ಧಾರ್ಥ್‌ಗೆ ನಾಯಕಿಯಾಗಿ ಚೈತ್ರಾ ನಟಿಸುತ್ತಿದ್ದಾರೆ. ‘ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ’ ಮತ್ತು ‘ಟೋಬಿ’ ಚಿತ್ರದಲ್ಲಿನ ಚೈತ್ರಾ ನಟನೆಗೆ ಅಭಿಮಾನಿಗಳಿಂದ ಭೇಷ್ ಎನಿಸಿಕೊಂಡಿದ್ದಾರೆ.

Comments (0)

Your email address will not be published. Required fields are marked *

Back to top button