#Exclusive NewsTop Newsಮನರಂಜನೆರಾಜ್ಯಸಿನಿಮಾಸುದ್ದಿ

‘ಅಣ್ಣ ತಮ್ಮ ಎಂದಮೇಲೆ ಜಗಳ ಇದ್ದೇ ಇರುತ್ತದೆ‘ ; ದಿನಕರ್ ತೂಗುದೀಪ

ನಿರ್ದೇಶಕ ದಿನಕರ್ ತೂಗುದೀಪ ಅವರು ನಿರ್ದೇಶಕನಾಗಿ, ನಟನಾಗಿ, ನಿರ್ಮಾಪಕನಾಗಿ, ಬರಹಗಾರನಾಗಿ ಗುರುತಿಸಿಕೊಂಡಿದ್ದಾರೆ. ಇವರು ‘ನವಗ್ರಹ’ ಸಿನಿಮಾ ನಿರ್ದೇಶನ ಮಾಡಿ ಭರ್ಜರಿ ಯಶಸ್ಸು ಕಂಡರು. ಈ ಚಿತ್ರದಲ್ಲಿ ದರ್ಶನ್ ಅವರು ನೆಗೆಟಿವ್ ಪಾತ್ರ ಮಾಡಿದ್ದರು. ಆ ಬಳಿಕ ದರ್ಶನ್​ ನಟನೆಯ ‘ಸಾರಥಿ’ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈಗ ಈ ಹಿಟ್ ಕಾಂಬಿನೇಷನ್ ಮತ್ತೊಮ್ಮೆ ಒಂದಾಗೋಕೆ ರೆಡಿ ಆಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ಹಾಗಂತ ಇವರು ಯಾವಾಗಲೂ ಜಗಳ ಆಡುತ್ತಾನೇ ಇರೋದಿಲ್ಲ. ‘ನಾವು ಮಾತನಾಡುತ್ತಲೇ ಇರುತ್ತೇವೆ. ತಿಂಗಳಿಗೊಮ್ಮೆ ಆಗೊಮ್ಮೆ ಈಗೊಮ್ಮೆ ನಮ್ಮ ಮಧ್ಯೆ ಮಾತುಕತೆ ನಡೆಯುತ್ತಾ ಇರುತ್ತದೆ. ಅತ್ತಿಗೆ ವಿಜಯಲಕ್ಷ್ಮೀ ಜೊತೆ ಯಾವಾಗಲೂ ಕಾಂಟ್ಯಾಕ್ಟ್​ನಲ್ಲಿದ್ದೇನೆ. ಈ ಸಿನಿಮಾಗೆ ದರ್ಶನ್ ಸಾಥ್ ಕೊಡಬಹುದು. ಸದ್ಯ ಅವರಿಗೆ ಬೆನ್ನು ನೋವಿದೆ. ಇದರ ಟ್ರೀಟ್​ಮೆಂಟ್​ಗಾಗಿ ಮೈಸೂರಿಗೆ ಹೋಗಿದ್ದೇವೆ. ಅಜಯ್ ಹೆಗಡೆ ಎರಡು ಬಾರಿ ಟ್ರೀಟ್​ಮೆಂಟ್ ಮಾಡಿದ್ದಾರೆ. ಈ ಕಾರಣಕ್ಕೆ ಅಲ್ಲಿಯೇ ಟ್ರೀಟ್​ಮೆಂಟ್ ನಡೆಯುತ್ತಿದೆ’ ಎಂದು ದಿನಕರ್ ಮಾಹಿತಿ ನೀಡಿದ್ದಾರೆ

Comments (0)

Your email address will not be published. Required fields are marked *

Back to top button