Top Newsಉಪ ಚುನಾವಣೆರಾಜಕೀಯರಾಜ್ಯಸುದ್ದಿ

ಚನ್ನಪಟ್ಟಣ ಉಪಚುನಾವಣೆ 2024: ಹಣಬಲ, ಅಧಿಕಾರ ಬಲದಿಂದ ಕಾಂಗ್ರೆಸ್ ಗೆಲುವು ಸಾಧಿಸಿದೆ -ಆರ್.ಅಶೋಕ್

ಬೆಂಗಳೂರು: ಉಪುಚುನಾವಣೆಯಲ್ಲಿ ಹಣಬಲ, ಅಧಿಕಾರ ಬಲದಿಂದ ಕಾಂಗ್ರೆಸ್ ಮುಂದೆ ಇದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಕ್ಷೇತ್ರದಲ್ಲಿ ಪ್ರಾರಂಭದಲ್ಲಿ ಫೈಟ್ ಇತ್ತು. ಅದರೆ ಈಗಿನ ಟ್ರೆಂಡ್ ಸಮಾಧಾನಕಾರ ಇಲ್ಲ. ಹಣಬಲ, ಅಧಿಕಾರ ಬಲದಿಂದ ಕಾಂಗ್ರೆಸ್ ಮುಂದೆ ಇದೆ. ಶಿಗ್ಗಾಂವಿಯಲ್ಲಿ ಗೆಲ್ಲುತ್ತೇವೆ ಎಂದುಕೊಂಡಿದ್ದೆವು. ಆದರೆ ಹಿನ್ನಡೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಿಖಿಲ್ ಕುಮಾರಸ್ವಾಮಿಗೆ ಅದೃಷ್ಟ ಇಲ್ಲ ಅನ್ನಿಸುತ್ತೆ, ನಿಖಿಲ್ ಅರ್ಜುನನ ಪಾತ್ರ ಮಾಡ್ತಾರೆ ಎಂದು ತಿಳಿದುಕೊಂಡಿದ್ದೆವು, ಆದರೆ ಜನ ಅವರನ್ನು ಅಭಿಮನ್ಯು ಪಾತ್ರದಲ್ಲಿ ಇರಿಸಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ. ಶಿಗ್ಗಾಂವಿಯಲ್ಲಿ ಗೆಲ್ಲುತ್ತೇವೆ ಎಂದುಕೊಂಡಿದ್ದೆವು. ಆದರೆ ಹಿನ್ನಡೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು ಕೊನೆ ಕ್ಷಣದಲ್ಲಿ ಅಭ್ಯರ್ಥಿ ಘೋಷಣೆ ಮಾಡಿದ್ದು ಬಿಜೆಪಿ ಸೋಲಿಗೆ ಕಾರಣ. ನಾವು ಒಂದು ವರ್ಷ, ಆರು ತಿಂಗಳಿಂದಲೇ ಅಭ್ಯರ್ಥಿ ತಯಾರು ಮಾಡಿ ಬಿಟ್ಟಿದ್ದರೆ ಮೂರು ಕ್ಷೇತ್ರಗಳಲ್ಲಿ ಒಳ್ಳೆಯ ಫಲಿತಾಂಶ ಬರುತ್ತಿತ್ತು ನಾವು ಕೊನೆಯ ಹಂತದಲ್ಲಿ ಚುನಾವಣೆ ಘೋಷಣೆ ಆದ ಮೇಲೆ ಅಭ್ಯರ್ಥಿ ತಯಾರು ಮಾಡಿದ್ದು ಕೂಡಾ ಹಿನ್ನೆಡೆ ಆಯ್ತು ಎಂದು ವಿಪಕ್ಷ ನಾಯಕ ಆರ್​ ಅಶೋಕ್​ ಹೇಳಿದರು.

ಮಹಾರಾಷ್ಟ್ರ, ಜಾರ್ಖಂಡ್ ಫಲಿತಾಂಶ ವಿಚಾರವಾಗಿ ಮಾತನಾಡಿ, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಬೊಬ್ಬೆ ಹೊಡೆಯುತ್ತಿದ್ದರು. ಅಲ್ಲಿನ ಜನ ಕಾಂಗ್ರೆಸ್‌ನ್ನು ತಿರಸ್ಕಾರ ಮಾಡಿದ್ದಾರೆ. ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ಸರ್ಕಾರವಿಲ್ಲ. ಸದ್ಯ ಬಿಜೆಪಿಗೆ ಮೇಲಗೈ ಸಿಗುತ್ತಿಲ್ಲ. ಮೋದಿಯವರ ಹವಾ ಎಲ್ಲ ಕಡೆಯಿದೆ ಎಂದರು.

Comments (0)

Your email address will not be published. Required fields are marked *

Back to top button