#Exclusive NewsTop Newsಜಿಲ್ಲೆಸುದ್ದಿ

ಸವರ್ಣಿಯರ ವಿರೋಧದ ನಡುವೆಯು ದಲಿತರಿಂದ‌ ದೇವಸ್ಥಾನ ಪ್ರವೇಶ ; ಮಂಡ್ಯ

ಮಂಡ್ಯ : ಸವರ್ಣಿಯರ ವಿರೋಧದ ನಡುವೆಯು ದಲಿತರಿಂದ‌ ದೇವಸ್ಥಾನ ಪ್ರವೇಶ ಮಾಡಿದ ಘಟನೆ ಮಮಡ್ಯ ಜಿಲ್ಲೆಯ ಹನಕೆರೆ ಗ್ರಾಮದಲ್ಲಿ ನಡೆದಿದೆ . ಸದ್ಯ ಭೂದಿ ಮುಚ್ಚಿದ ಕೆಂಡವಾದ ಹನಕೆರೆ ಗ್ರಾಮ.ಹನಕೆರೆ ಗ್ರಾಮದ ಕಾಲಭೈರವೇಶ್ವರ ಸ್ವಾಮಿ ದೇವಾಲಯ ದಲಿತರ ಪ್ರವೇಶಕ್ಕೆಹಿಂದಿನಿಂದಲೂ ನಿರ್ಬಂಧವಿದೆ.ಕಳೆದ ಎರಡುವರೆ ವರ್ಷಗಳ ಹಿಂದೆ ದೇವಾಲಯ ಪುನರ್ ನಿರ್ಮಾಣ.ನಂತರ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಸೇರಿದ್ದ ದೇವಾಲಯ.ಧಾರ್ಮಿಕ ದತ್ತಿ ವ್ಯಾಪ್ತಿಗೆ ಬರ್ತಿದ್ದಂತೆ ದಲಿತರ ಪ್ರವೇಶಕ್ಕೆ ಅವಕಾಶ ಕೊಡುವಂತೆ ಪಟ್ಟು.ದಲಿತರ ದೇವಾಲಯ ಪ್ರವೇಶಕ್ಕೆ ಒಪ್ಪದ ಗ್ರಾಮದ ಸವರ್ಣೀಯರು.2 ಬಾರಿ ನಡೆಸಿದ ಶಾಂತಿ ಸಭೆಯೂ ವಿಫಲ.ಇಂದು ಪೊಲೀಸರ ಭದ್ರತೆ ನಡುವೆ ದೇವಾಲಯ ಪ್ರವೇಶಿಸಿದ ದಲಿತರು.ದಲಿತರ ದೇವಾಲಯ ಪ್ರವೇಶಕ್ಕೆ ತೀವ್ರ ವಿರೋಧ.ದೇವಾಲಯ ಒಳನುಗ್ಗಿ ಉತ್ಸವ ಮೂರ್ತಿ ಹೊತ್ತುತಂದ ಸವರ್ಣೀಯರು.ದೇವಾಲಯದ ಹಸರಿನ ಫಲಕ ತಂದು ಆಚೆ ಎಸೆದು ಆಕ್ರೋಶ.ದೇವಾಲಯ ಅವರೇ ಇಟ್ಟುಕೊಳ್ಳಲಿ, ದೇವರನ್ನ ನಾವು ತೆಗೆದುಕೊಂಡು ಹೋಗ್ತೀವಿ.ಎಲ್ಲರೂ ಕೂಲಿ ಮಾಡಿ ಸಂಪಾದಿಸಿದ ಹಣ ಕೊಟ್ಟು ದೇವಾಲಯ ನಿರ್ಮಾಣ ಮಾಡಿದ್ದೇವೆ.ಈಗ ಏಕಾಏಕಿ ನಮ್ಮ ಸಂಪ್ರದಾಯ ಮುರಿದರೆ ಹೇಗೆ.ದೇವರ ಮೂರ್ತಿ ವಾಪಾಸ್ ಇಡುವಂತೆ ಕೇಳಿದ ಅಧಿಕಾರಿಗಳ ಮುಂದೆ ಗ್ರಾಮಸ್ಥರು ಆಕ್ರೋಶ.ಘಟನೆ ಹಿನ್ನೆಲೆ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್.ದೇವಾಲಯ ಬಳಿ ಹೆಚ್ಚಿನ ಪೊಲೀಸರ ನಿಯೋಜನೆ.

Comments (0)

Your email address will not be published. Required fields are marked *

Back to top button