ರಾಜಕೀಯ
ಭೋಜನಾ ಬಂಡಿಯಗಿ ಬಂತು BMTC

ಮಾನ್ಯರೇ,
ವಿಷಯ: ಅನುಪಯುಕ್ತ ವಾಹನವನ್ನು ಭೋಜನಾ ಬಂಡಿಯನ್ನಾಗಿ ಪರಿವರ್ತಿಸಿದ
ತಾಂತ್ರಿಕ ಸಿಬ್ಬಂದಿಗಳಿಗೆ ಪ್ರಶಂಸನಾ ಪತ್ರ ವಿತರಿಸಿರುವ ಕುರಿತು.
***
ಉತ್ತರ ವಲಯದ 10,64,298 ಕಿ.ಮೀ. ಕ್ರಮಿಸಿದ್ದ ಲೇಲ್ಯಾಂಡ್ ಉಗ್ರಾಣ ವಾಹನವನ್ನು ಭೋಜನಾ ಬಂಡಿಯನ್ನಾಗಿ ಪರಿವರ್ತಿಸಲು ಮುಖ್ಯ ಪಾತ್ರ ವಹಿಸಿದ ದಾಸನಪುರದಲ್ಲಿರುವ ಕೇಂದ್ರೀಯ ಕಾರ್ಯಾಗಾರ-4ರ ತಾಂತ್ರಿಕ ಸಿಬ್ಬಂದಿಗಳು ಹಾಗೂ ಚಾಲನಾ ಸಿಬ್ಬಂದಿಗೆ ದಿನಾಂಕ:26-08-2024 ರಂದು ಬೆಂ.ಮ.ಸಾ.ಸಂಸ್ಥೆಯ ಕೇಂದ್ರ ಕಛೇರಿಯಲ್ಲಿ ಸನ್ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ ರವರು ಅನುಪಯುಕ್ತ ವಾಹನದಿಂದ ಭೋಜನಾ ಬಂಡಿ/ಮೊಬೈಲ್ ಕ್ಯಾಂಟೀನ್ ನಿರ್ಮಿಸಿದ ತಾಂತ್ರಿಕ ಸಿಬ್ಬಂದಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿರುತ್ತಾರೆ. ಈ ಸರಳ ಸಮಾರಂಭದಲ್ಲಿ ಸಂಸ್ಥೆಯ ಮಾನ್ಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಮಚಂದ್ರನ್.ಆರ್, ನಿರ್ದೇಶಕರು (ಮಾ.ತಂ) ರವರಾದ ಶ್ರೀಮತಿ ಶಿಲ್ಪಾ.ಎಂ ಮತ್ತು ಮುಖ್ಯ ತಾಂತ್ರಿಕ ಅಭಿಯಂತರರಾದ ಶ್ರೀ ಎ.ಎನ್.ಗಜೇಂದ್ರ ಕುಮಾರ್ ಹಾಗೂ ಸಂಸ್ಥೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಭೋಜನಾ ಬಂಡಿಯ ವೈಶಿಷ್ಟ್ಯಗಳು:
ಭೋಜನಾ ಬಂಡಿಯು ಕ್ಯಾಂಟೀನ್ ಕಟ್ಟಡಗಳಿಲ್ಲದ ನೂತನವಾಗಿ ನಿರ್ಮಿತವಾಗಿರುವ ಘಟಕಗಳು/ಬಸ್ ನಿಲ್ದಾಣಗಳಲ್ಲಿ ಸಂಸ್ಥೆಯ ಸಿಬ್ಬಂದಿಗಳು ಕುಳಿತು ತಿಂಡಿ, ಊಟ ಮಾಡಲು ಉಪಯೋಗಿಸಬಹುದು ಎನ್ನುವ ಒಂದು ಸುಂದರ ಆಲೋಚನೆಯ ಮೇಲೆ ನಿಷ್ಕ್ರಿಯಗೊಂಡ ವಾಹನದಿಂದ ಭೋಜನಾ ಬಂಡಿಯನ್ನು ನಿರ್ಮಿಸಲಾಗಿದೆ. ತಾಂತ್ರಿಕ ಸಿಬ್ಬಂದಿಗಳ ಕಾರ್ಯಗಳಿಂದ ನಿರ್ಮಿತವಾದ ಬಸ್ಸಿಗೆ ಭೋಜನ ಬಂಡಿ, “ಬನ್ನಿ, ಕುಳಿತು ಊಟ ಮಾಡೋಣ” ಎಂಬ ಸುಂದರ ಶೀರ್ಷಿಕೆಯೊಂದಿಗೆ ಭೋಜನ ಬಂಡಿಯನ್ನು ತಯಾರಿಸಲಾಗಿದೆ.
ಭೋಜನ ಬಂಡಿಯಲ್ಲಿರುವ ವಿನೂತನ ವ್ಯವಸ್ಥೆಗಳು:-
• ಕುಳಿತುಕೊಳ್ಳಲು ಆಸನ ಮತ್ತು ಟೇಬಲ್ ವ್ಯವಸ್ಥೆ
• ಫ್ಯಾನ್ಗಳ ವ್ಯವಸ್ಥೆ
• ಕೈತೊಳೆಯಲು ವಾಶ್ ಬೇಸಿನ್
• ಕುಡಿಯುವ ನೀರಿನ ವ್ಯವಸ್ಥೆ
• ಮೇಲ್ಛಾವಣಿಯಲ್ಲಿ ಗಾಜಿನ ಕಿಟಕಿಯಿದ ಗಾಳಿ/ಬೆಳಕು ಬರುವ ವ್ಯವಸ್ಥೆ
• ಬಸ್ಸಿನ ಎರಡು ಬದಿಯಲ್ಲಿ ಗಾಳಿ/ ಬೆಳಕು ಬರುವ ವ್ಯವಸ್ಥೆ
ವಂದನೆಗಳೊಂದಿಗೆ,
ಸಹಿ/-
ಸಾರ್ವಜನಿಕ ಸಂಪರ್ಕಾಧಿಕಾರಿ
ಇವರಿಗೆ:
ಸಂಪಾದಕರು/ಪತ್ರಿಕೋದ್ಯಮ
ಈ ಮೇಲಿನ ಪತ್ರಿಕಾ ಪ್ರಕಟಣೆಯನ್ನು ತಮ್ಮ ದಿನಪತ್ರಿಕೆ/ದೃಷ್ಯ/ಎಫ್ಎಂ ರೇಡಿಯೊ/ಮುದ್ರಣ ಮಾಧ್ಯಮಗಳಲ್ಲಿ ಪ್ರಕಟಿಸಿ ಸಾರ್ವಜನಿಕ ಗಮನಕ್ಕೆ ತರಲು ಕೋರಲಾಗಿದೆ.




