ಲೈಫ್ ಸ್ಟೈಲ್

ಇಂದು ಆಸ್ಪತ್ರೆಗೆ ಹೋಗುವವರು ಈ ಸುದ್ದಿ ಒಮ್ಮೆ ನೋಡಿ

ಪಶ್ಚಿಮ ಬಂಗಾಳ ರಾಜ್ಯದ ಕೊಲ್ಕತ್ತಾದಲ್ಲಿ ವೈದ್ಯಕೀಯ ವಿದ್ಯಾರ್ಥಿ ಮೇಲೆ ರೇಪ್ ಅಂಡ್ ಮರ್ಡರ್ ಆಗಿತ್ತು, ಈ ದುರ್ಘಟನೆಯನ್ನು ಖಂಡಿಸಿ, ದೇಶ ವ್ಯಾಪ್ತಿಯಲ್ಲಿ ಇಂದು ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಗಾಗಿ ಇಂದು ಬೆಂಗಳೂರಿನಲ್ಲಿಯೂ ಸಹ ಪ್ರತಿಭಟನೆ ನಡೆಯಲಿದೆ , ತುರ್ತು ಚಿಕಿತ್ಸೆ ಹಾಗೂ ಒಳ ರೋಗಿಗಳ ಚಿಕಿತ್ಸೆ ಹೊರತಾಗಿ ಬೇರೆ ಎಲ್ಲಾ ಆರೋಗ್ಯ ಸೇವೆಗಳು ಸ್ಥಗಿತಗೊಳ್ಳಲಿದೆ, ಎಲ್ಲಾ ಸೇವೆಗಳನ್ನು 20 ನಾಲ್ಕು ಗಂಟೆಗಳು ಬಂದು ಮಾಡಿ ಪ್ರತಿಭಟನೆ ನಡೆಸಲಾಗುತ್ತದೆ, ಬೆಳಿಗ್ಗೆ 11 ಗಂಟೆಗೆ ಚಾಮರಾಜಪೇಟೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸರ್ಕಾರಿ ವೈದ್ಯರು ಕೈಗೆ ಕಪ್ಪು ಬಟ್ಟೆಯನ್ನು ಧರಿಸಿ ಕೆಲಸ ಮಾಡುತ್ತಿದ್ದಾರೆ. ಔಟ್ ಪೆಶನ್ ಡಿಪಾರ್ಟ್ಮೆಂಟ್ (ಓ ಪಿ ಡಿ ) ಸಂಪೂರ್ಣವಾಗಿ ಬಂದ್ ಆಗಿದ್ದು ಆಸ್ಪತ್ರೆಗೆ ಬರುವವರಿಗೆ ಇಂದು ಯಾವುದೇ ರೀತಿಯ ಚಿಕಿತ್ಸೆ ದೊರೆಯುವುದಿಲ್ಲ.

Comments (0)

Your email address will not be published. Required fields are marked *

Back to top button