ರಾಜಕೀಯಸುದ್ದಿ

ಆಸ್ಪತ್ರೆಗೆ ಭೇಟಿ ನೀಡಿ ‘ಎಸ್.ಎಂ ಕೃಷ್ಣ’ ಆರೋಗ್ಯ ವಿಚಾರಿಸಿದ ‘ಸಿಎಂ ಸಿದ್ಧರಾಮಯ್ಯ’

ಬೆಂಗಳೂರು:  ಏಪ್ರಿಲ್ 22ರಂದು ಎಸ್‌ಎಂ ಕೃಷ್ಣ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಜ್ವರ, ಕೆಮ್ಮು ಕಾಣಿಸಿಕೊಂಡ ಹಿನ್ನೆಲೆ ಬೆಂಗಳೂರಿನ ವಿಠಲ್ ಮಲ್ಯ ರಸ್ತೆಯ ವೈದೇಹಿ ಆಸ್ಪತ್ರೆಗೆ ದಾಖಲಾ ಚಿಕಿತ್ಸೆ ಪಡೆದುಕೊಂಡು ಡಿಸ್ಮಾರ್ಜ್ ಆಗಿದ್ದರು. ಏಪ್ರಿಲ್ 29 ರಂದು ಎಸ್‌ಎಂ ಕೃಷ್ಣ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದ್ದು, ಇದೀಗ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಅವರನ್ನು ಇಂದು ಸಿಎಂ ಸಿದ್ಧರಾಮಯ್ಯ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಆರೋಗ್ಯ ವಿಚಾರಿಸಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದರು.

 

Comments (0)

Your email address will not be published. Required fields are marked *

Back to top button