ರಾಜಕೀಯ

ಬಿಜೆಪಿಯವರಿಗೂ ಆ ಪ್ರಕರಣಕ್ಕೂ ಸಂಬಂಧ ಏನು? – ಕುಮಾರಸ್ವಾಮಿ

ಕಲಬುರಗಿ : ಕುಮಾರಸ್ವಾಮಿ ಸೀಮಿತ ಕೊಳೆದುಕೊಂಡು ಮಾತನಾಡುತ್ತಿದ್ದಾರೆ ಅನ್ನೋ ಡಿ.ಕೆ. ಶಿವಕುಮಾರ್ ಹೇಳಿಕೆಗೆ  ಕುಮಾರಸ್ವಾಮಿ ಶನಿವಾರ ತಿರುಗೇಟು ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಸೀಮಿತವಾಗಿರೋದಕ್ಕೆ ಮಾತಾಡುತ್ತಿದ್ದೆನೆ. ಅವರ ಸೀಮಿತ ಭದ್ರವಾಗಿದೆ ಎಂದು ಹೇಳಿದರು. ಇನ್ನು ಲಯರ್ ದೇವರಾಜಗೌಡ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಈ ವಿಷಯವನ್ನು ಇಟ್ಟುಕೊಂಡು ಒಕ್ಕಲಿಗರ ನಾಯಕತ್ವ ಪಡೆಯೋದು ಇದೆಯಲ್ಲ ಅದು ಎಲ್ಲಾ ಭ್ರಮೆ ಎಂದರು.

ಗನ್ ಪಾಯಿಂಟ್ ವಿಚಾರವಾಗಿ ಹೇಳಿದ ಅವರು, ಒಬ್ಬ ಮಹಿಳೆಯಿಂದ ಹೇಳಿಕೆ ಕೋಡಿಸಿದ್ದಾರೆ. 2021 ರ ಹೇಳಿಕೆಯನ್ನು ಜಡ್ಜ್ ಮುಂದೆ ಹೇಳಿಸಿದ್ದೇವೆ ನಮ್ಮ ಮೇಲೆ ಯಾವುದೇ ರೀತಿ ಅನುಮಾನ ಬರಬಾರದು ಅಂತ ಗೃಹ ಸಚಿವರು ಹೇಳಿದ್ದಾರೆ.ಜಡ್ಜ್ ಮುಂದೆ ರಹಸ್ಯವಾಗಿ ಹೇಳಿಕೆ ಕೋಡಿಸಿದ್ದರೆ, ಮಾಧ್ಯಮಗಳಿಗೆ ವಿಷಯ ಕೊಟ್ಟವರು ಯಾರು, ಮಾಧ್ಯಮಗಳ ಮುಂದೆ ನೀವೇ ಹೇಳಿಕೆ ಕೊಡಿಸೋ ಕೆಲಸ ಮಾಡಿದ್ರೆ  ಮಾಧ್ಯಮಗಳ ಮುಂದೆ ಬಂದ್ರೆ ತನಿಖೆ ಎಲ್ಲಿಗೆ ಹೋಗಬಹುದು ಎಂದು ಹೇಳಿದರು.

ಪೆಂಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯವರು ಉತ್ತರ ಕೋಡುತ್ತಿಲ್ಲ ಅನ್ನೋ ಡಿಕೆ ಶಿವಕುಮಾರ್ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು ನೀಡಿದರು ಬಿಜೆಪಿಯವರಿಗೂ ಆ ಪ್ರಕರಣಕ್ಕೂ ಸಂಬಂಧ ಏನು? ನಮ್ಮ ಕುಟುಂಬಕ್ಕೆ ಸುತ್ತಾಕೊಂಡಿರೋದು ಅಲ್ವಾ ಕುಮಾರಸ್ವಾಮಿ ದೇವೇಗೌಡರ ಹೆಸರನ್ನ ಪದೇ ಪದೇ ಹೇಳುತ್ತಿದ್ದಾರೆ ಅದಕ್ಕೆ ನಾನು ಉತ್ತರ ಕೋಡಬೇಕು ಕೊಟ್ಟಿದ್ದಿನಿ ಎಂದು ಕುಮಾರಸ್ವಾಮಿ ಹೇಳಿದರು.

Comments (0)

Your email address will not be published. Required fields are marked *

Back to top button