ರಾಜಕೀಯಸುದ್ದಿ

ಬೆಂ. ಉತ್ತರ‌ ಕಾಂಗ್ರೆಸ್ ಅಭ್ಯರ್ಥಿ ಪ್ರೋ. ರಾಜೀವ್ ಗೌಡ ಮತದಾನ

ಬೆಂಗಳೂರು: ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊಫೆಸರ್ ಎಂ ವಿ ರಾಜೀವ್ ಗೌಡ ಅವರು ಜೆಪಿ ನಗರ ಸಾರಕ್ಕಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಮತದಾನ ಮಾಡಿದರು. ಇದೇ ವೇಳೆ ಮಾತನಾಡಿದ ಅವರು, ನಾನು ನನ್ನ ಮತವನ್ನು ಕರ್ನಾಟಕದ ಅಭಿವೃದ್ಧಿಗಾಗಿ ಜನತೆಯ ಹಿತಕ್ಕಾಗಿ ಚಲಾಯಿಸಿದ್ದೇನೆ.

ನೀವೂ ಕೂಡ ಅಭಿವೃದ್ಧಿ ಶೂನ್ಯ ಹತ್ತು ವರ್ಷಗಳ ಅವಧಿಯ ಆಡಳಿತದ ಬದಲಾವಣೆಗಾಗಿ ಮತ ಚಲಾಯಿಸಿರಿ.ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಮತ ಚಲಾಯಿಸಿರಿ .ಸುಂದರ, ಸ್ವಚ್ಛ, ಸಮೃದ್ಧ, ಸೌಹಾರ್ದ ಬೆಂಗಳೂರಿಗೆ ಮತ ಚಲಾಯಿಸಿರಿ.ಸ್ವಾಭಿಮಾನಿ ಕನ್ನಡಿಗರ ಕರ್ನಾಟಕದ ಆರ್ಥಿಕ ನ್ಯಾಯಕ್ಕಾಗಿ ಮತ ಚಲಾಯಿಸಿರಿ .ಗ್ಯಾರಂಟಿ ಯೋಜನೆಗಳ ಉತ್ತಮ ಅನುಷ್ಠಾನಕ್ಕಾಗಿ ಮತ ಚಲಾಯಿಸಿರಿಎಂದು ಮನವಿ ಮನವಿ ಮಾಡಿದ್ದರು.

Comments (0)

Your email address will not be published. Required fields are marked *

Back to top button