ರಾಜ್ಯಸುದ್ದಿ

ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆ ಬಗ್ಗೆ ಸಚಿವ ನಾಗೇಂದ್ರ ಪ್ರತಿಕ್ರಿಯೆ

ಬಳ್ಳಾರಿ : ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆ ಬಗ್ಗೆ ಸಚಿವ ನಾಗೇಂದ್ರ ಪ್ರತಿಕ್ರಿಯಿಸಿ, ಒಂದು ಪಕ್ಷ ಸ್ಥಾಪನೆ ಮಾಡಿಕೊಂಡು ಬಿಜೆಪಿಯನ್ನು ಮಕಾಡೆ ಮಲಗಿಸುವೆ ಎಂದಿದ್ದರು ಜನಾರ್ದನ ರೆಡ್ಡಿ. ಆದರೆ ಈಗ ಬಿಜೆಪಿ ಸೇರಿರೋದು ಬಹಳಷ್ಟು ವಿಪರ್ಯಾಸ. ಜನಾರ್ಧನ ರೆಡ್ಡಿ ಅವರು ಬಿಜೆಪಿ ಸೇರಿ ತಪ್ಪುಮಾಡಿದ್ರು ಎಂದು ಹೇಳಿದರು.

ಜನಾರ್ದನ ರೆಡ್ಡಿ ಅವರು ಜಾತ್ಯಾತೀತ ಮನೋಭಾವನೆ ಇರುವಂತಹವರು. ಗಂಗಾವತಿಯಲ್ಲಿ ಅನೇಕ ಜನ ಮುಸಲ್ಮಾನರು ಮತ ಕೊಟ್ಟಿದ್ದಾರೆ, ಈಗ ಜನಾರ್ದನ ರೆಡ್ಡಿ ಅವರು ಅಲ್ಲಿನ‌ ಮುಸಲ್ಮಾನರಿಗೆ ಏನು ಉತ್ತರ ಕೊಡ್ತಾರೋ ಗೊತ್ತಿಲ್ಲ. ಜನಾರ್ದನ ರೆಡ್ಡಿ ಅವರ ಮೇಲಿನ ಕೇಸುಗಳ ಬಗ್ಗೆ ಭಯ ಆಗಿ ಅಥವಾ ಕೇಸ್​ಗಳ ಬಗ್ಗೆ ರಿಲ್ಯಾಕ್ಸೇಷನ್ ಗೋಸ್ಕರ ಬಿಜೆಪಿ ಸೇರಿರಬಹುದು ಎಂದರು.

ಆದರೆ ಜನಾರ್ದನ ರೆಡ್ಡಿ ಅವರು ಎಲ್ಲಿದ್ದರು ಒಳ್ಳೆದಾಗಲಿ. ನಾನೊಬ್ಬ ಸ್ನೇಹಿತನಾಗಿ ಶುಭಕೋರುವೆ. ಯಾರೋ ಒಬ್ಬರು ಬಂದ್ರೆ ಅಲ್ಲಾಡುವ ಪಾರ್ಟಿಯಲ್ಲ ಕಾಂಗ್ರೆಸ್, ಜನಾರ್ದನ ರೆಡ್ಡಿ ಅಂತಹವರು ನೂರು ಜನ ಬಿಜೆಪಿ ಸೇರಿದ್ರೂ ಕಾಂಗ್ರೆಸ್​ಗೆ ಏನು ಆಗಲ್ಲ. ಬಿಜೆಪಿ ಅವರು ಜೆಡಿಎಸ್ ಅಂತವರನ್ನೇ ಸೇರಿಸಿಕೊಂಡಿದ್ದಾರೆ. ಅಂತದ್ರಲ್ಲಿ ಜನಾರ್ದನ ರೆಡ್ಡಿ ಸೇರಿದ್ರಲ್ಲಿ ಏನ್ ತಪ್ಪಿದೆ. ಜನಾರ್ದನ ರೆಡ್ಡಿ ಬಿಜೆಪಿಗೆ ಹೋಗಿದ್ದರೆ ಅದಕ್ಕೆ ಪರ್ಯಾಯವಾಗಿ ನಾವು ವ್ಯವಸ್ಥೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.

Comments (0)

Your email address will not be published. Required fields are marked *

Back to top button