ಕ್ರೈಂ ಸ್ಟೋರಿರಾಜ್ಯವೈರಲ್ ನ್ಯೂಸ್

ಏರ್​​ಪೋರ್ಟ್​​ ರಸ್ತೆಯಲ್ಲಿ ಕಾರ್​​ರೂಫ್​​​ ಮೇಲೆ ಯುವಕರ ಪುಂಡಾಟ

ಬೆಂಗಳೂರು : ಬೆಂಗಳೂರಿನ ಏರ್​​ಪೋರ್ಟ್​​​ ರಸ್ತೆ ಮಧ್ಯೆ ಕಾರ್​​​ರೂಪ್​​ ಮೇಲೆ ಡ್ಯಾನ್ಸ್ ಮಾಡಿ ಕೆಲ ಯುವಕರು ಹುಚ್ಚಾಟ ಮೆರೆದಿದ್ದಾರೆ.

ಇನ್ನೂ ಈ ವಿಡಿಯೋವನ್ನ ಸಾರ್ವಜನಿಕರು ಸೆರೆಹಿಡಿದು ಪೋಲಿಸ​​​ರಿಗೆ ಟ್ಯಾಗ್​ ಮಾಡಿದ್ದಾರೆ. ವಿಡಿಯೋ ಆಧರಿಸಿ ಚಿಕ್ಕಜಾಲ ಸಂಚಾರ ಠಾಣಾ ಪೊಲೀಸರು ಕಾರ್​ ನಂಬರ್​​ ಆಧರಿಸಿ ಎಫ್​​ಐಆರ್​​ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ. DL 3cba9775 ನಂಬರಿನ ಕಾರಿನಲ್ಲಿ ಹುಚ್ಚಾಟ ಮೆರೆದಿದ್ದು ಸಾರ್ವಜನಿಕರು ತಮ್ಮ ಮೊಬೈಲ್​​ನಲ್ಲಿ ಸೆರೆಹಿಡಿದಿದ್ದಾರೆ. ಕುಡಿದ ಅಮಲಿನಲ್ಲಿ ಪುಂಡಾಟ ಮೆರೆದಿದ್ದಾರೆ ಅನ್ನೋ ಶಂಕೆ ವ್ಯಕ್ತವಾಗಿದ್ದು ತನಿಖೆ ಬಳಿಕ ಎಲ್ಲವೂ ಗೊತ್ತಾಗಲಿದೆ. ಚಿಕ್ಕಜಾಲ ಸಂಚಾರ ಠಾಣಾ ಪೊಲೀಸರು ಇಂಡಿಯನ್ ಮೊಟಾರ್ ಸೈಕಲ್ ಆ್ಯಕ್ಟ್ ಅಡಿ ಪ್ರಕರಣ ದಾಖಲಾಗಿದೆ.

Comments (0)

Your email address will not be published. Required fields are marked *

Back to top button