Mangaluru | ಕ್ಷುಲಕ ಕಾರಣಕ್ಕೆ ಯುವನ ಹ*ತ್ಯೆ, ಇಬ್ಬರ ಬಂಧನ

ಮಂಗಳೂರು: ಯುವಕನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಉಳ್ಳಾಲ ಠಾಣೆ ವ್ಯಾಪ್ತಿಯ ಕೊಲ್ಯ ಸಾರಸ್ವತ ಕಾಲೋನಿ ಶಾಲೆಯ ಬಳಿ ಬುಧವಾರ ರಾತ್ರಿ ನಡೆದಿದೆ.
ಹತ್ಯೆಗೀಡಾಗಿರುವ ಯುವಕನನ್ನು ಕೊಲ್ಯ ಸಾರಸ್ವತ ಕಾಲೋನಿಯ ನಿವಾಸಿ ವರುಣ್ ಗಟ್ಟಿ (28) ಎಂದು ಗುರುತಿಸಲಾಗಿದೆ. ಶಾಲೆಯ ಎದುರು ಬಿಯರ್ ಕುಡಿದು ಬಾಟಲಿ ರಸ್ತೆಗೆ ಎಸೆದಿರುವುದನ್ನು ಪ್ರಶ್ನೆ ಮಾಡಿದ್ದಕ್ಕೆ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಶಾಲೆ ಮುಂಭಾಗದ ಕಟ್ಟೆಯಲ್ಲ ಕುಳಿತು ಸೂರಜ್ ಮತ್ತು ರವಿರಾಜ್ ಎಂಬುವವರು ಬಿಯರ್ ಕುಡಿದು ಬಾಟಲಿಯನ್ನು ರಸ್ತೆಗೆ ಎಸೆದಿದ್ದರು ಎನ್ನಲಾಗಿದೆ. ಈ ವೇಳೆ ವರುಣ್ ಮತ್ತು ಆತನ ಸ್ನೇಹಿತ ಅಕ್ಷಯ್ ಶಾಲೆಯ ಮುಂದೆ ಬಿಯರ್ ಬಾಟಲಿ ಎಸೆಯುವುದನ್ನು ಪ್ರಶ್ನಿಸಿದ್ದಾರೆ. ಇದೇ ಕಾರಣಕ್ಕೆ ವಾಗ್ವಾದ ನಡೆದು ವರುಣ್ ಬೆನ್ನಿಗೆ ಆಯುಧದಿಂದ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡ ವರುಣ್ ಎಂಬುವರನ್ನು ಸಹೋದರ ಶರಣ್ ಮತ್ತು ಸ್ನೇಹಿತರು ತಕ್ಷಣವೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಕರೆತರುಬಾಗಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿಗಳಾದ ಸೂರಜ್ ಮತ್ತು ರವಿರಾಜ್ ಎಂಬುವರನ್ನು ಉಳ್ಳಾಲ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.




