Tuesday, February 10, 2026
22.9 C
Bengaluru
Google search engine
LIVE
ಮನೆಜಿಲ್ಲೆಮತ್ಸ್ಯ ಮೇಳದಲ್ಲಿ ಸಿಎಂ- ಡಿಕೆಶಿ ಭಾಗಿ; ಮೀನುಗಾರರಿಗೆ ಬೆಂಬಲ ನೀಡುವುದಾಗಿ ಸಿಎಂ ಭರವಸೆ

ಮತ್ಸ್ಯ ಮೇಳದಲ್ಲಿ ಸಿಎಂ- ಡಿಕೆಶಿ ಭಾಗಿ; ಮೀನುಗಾರರಿಗೆ ಬೆಂಬಲ ನೀಡುವುದಾಗಿ ಸಿಎಂ ಭರವಸೆ

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸಿಎಂ–ಡಿಸಿಎಂ ಕುರ್ಚಿ ಪೈಪೋಟಿ ನಡುವೆಯೇ ಮತ್ಸ್ಯ ಮೇಳದಲ್ಲಿ ಇಬ್ಬರೂ ನಾಯಕರು ಒಂದೇ ವೇದಿಕೆಯನ್ನು ಹಂಚಿಕೊಂಡದ್ದು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ವಿಶ್ವ ಮೀನುಗಾರಿಕೆ ದಿನಾಚರಣೆ -2025 ನಿಮಿತ್ತ ಹೆಬ್ಬಾಳದಲ್ಲಿ ಮತ್ಸ್ಯ ಮೇಳ ನಡೆಯುತ್ತಿದೆ. ನವೆಂಬರ್ 21 ರಿಂದ ಆರಂಭವಾಗಿರುವ ಈ ಕಾರ್ಯಕ್ರಮವು ನಾಳೆಯವರೆಗೆ ನಡೆಯಲಿದೆ. ನಗದಿಯಂತೆ ಇವತ್ತಿನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಆಗಮಿಸಿದ್ದಾರೆ.

May be an image of one or more people, dais and text that says "ธราภร ಇಲಾಜೆ"

ಮೀನುಗಾರರ ದೊಡ್ಡ ಸಮೂಹದ ನಡುವೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮೀನಗಾರಿಕೆ ದೇಶದ ಅತ್ಯಂತ ಕಷ್ಟದ ಉದ್ಯೋಗ. ಭಾರತದ 7.7% ಮೀನು ಉತ್ಪಾದನೆಯ ಅಂಕಿ–ಅಂಶ, ರಫ್ತು ಕ್ಷೇತ್ರದಲ್ಲಿ ದೇಶದ ನಾಲ್ಕನೇ ಸ್ಥಾನ, ಮತ್ತು ಕರಾವಳಿಯ 320 ಕಿಮೀ ಉದ್ದದ ಸವಾಲು–ಸಾಧ್ಯತೆಗಳ ಬಗ್ಗೆ ವಿವರಿಸಿದರು. ನನಗೂ ಮೀನು ಹಿಡಿಯಲು ಬರುತ್ತದೆ ಎಂದು ಹೇಳಿ ಜನರಿಂದ ಚಪ್ಪಾಳೆ ಗಳಿಸಿದ ಸಿಎಂ, ಮೀನುಗಾರಿಕೆಯನ್ನು ಉದ್ಯೋಗ, ಆರ್ಥಿಕ ವೃದ್ಧಿ ಮತ್ತು ಕುಟುಂಬಗಳ ಬದುಕು ಕಟ್ಟುವ ಬೃಹತ್ ತಳಹದಿ ಎಂದು ಪದೇ ಪದೇ ಒತ್ತಿಹೇಳಿದರು.

May be an image of text

ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಮೀನುಗಾರಿಕೆಗೆ ಅವಲಂಬಿತರಾಗಿದ್ದಾರೆ ಎಂಬ ವಿಚಾರವನ್ನು ನೆನಪಿಸಿಕೊಂಡ ಸಿಎಂ ಸರ್ಕಾರ ಈ ವಲಯಕ್ಕೆ ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

 

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments