ರಾಜ್ಯಸುದ್ದಿ

ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಪ್ರಕರಣ : ಬೇಜಾವಬ್ದಾರಿ ಉತ್ತರ ನೀಡಿದ ಪರಂ

ತುಮಕೂರು : ಶಕ್ತಿ ಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಆರೋಪದ ಮೇಲೆ ಮೂವರು ಆರೋಪಿಗಳ ಅರೆಸ್ಟ್ ಮಾಡಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಬೇಜಾವಬ್ದಾರಿ ಉತ್ತರ ನೀಡಿದ್ದು, ಈ ವಿಷಯ ಕುರಿತು ಯಾವುದೇ ಪೋನ್ ಬಂದಿಲ್ಲ. ನನಗೆ ಗೊತ್ತಿಲ್ಲ, ಬೆಳಗ್ಗೆಯಿಂದಲೂ ನಿಮ್ಮ ಜೋತೆಯಲ್ಲೇ ಇದ್ದೇನೆ. ಅರೆಸ್ಟ್ ಅಗಿದ್ದಾರ ಎಂದು ಮಾಧ್ಯಮದವರನ್ನೇ ಪ್ರಶ್ನೆ ಮಾಡಿದರು.

ಬಳಿಕ ಮಾತನಾಡಿದ ಅವರು, ಬೆಳಗ್ಗೆಯಿಂದ ನನಗೆ ಮಾಹಿತಿ ಇಲ್ಲ. ಪೊಲೀಸರಿಗೆ ಫ್ರೀಡಂ ಕೊಟ್ಟಿದ್ದೇವೆ ಅವರ ಕೆಲಸ, ಅವರು ಮಾಡಿದ್ದಾರೆ. ಅರೆಸ್ಟ್ ಆಗಿರುವ ಬಗ್ಗೆ ವೆರಿಫೈ ಮಾಡುತ್ತೇನೆ. ನಾನು ಹೋಂ ಮಿನಿಸ್ಟರ್ ಆಗಿ ಸುಮ್ಮನೆ ಹಂಗೆ ಹೇಳೊದಕ್ಕೆ ಆಗಲ್ಲ ಎಂದರು.

ನಾವು ಯಾವ ಯಾವ ರೀತಿ ಮಾರ್ಗದರ್ಶನ ಕೊಟ್ಟಿದ್ದೆವು ಅದೇ ರೀತಿ ವಿಧಾನಸೌಧ ಪೊಲೀಸರು ತನಿಖೆ ಮಾಡಿರುತ್ತಾರೆ. ನಾನು ಈಗ ಬೆಂಗಳೂರಿಗೆ ಹೋಗುತ್ತೇನೆ. ಅರೆಸ್ಟ್ ಆದ ಬಗ್ಗೆ ಕನ್ಫರ್ಮ್ ಆದ್ರೆ ಅವಾಗ ನಾನು ಕನ್ಫರ್ಮ್ ಮಾಡುತ್ತೇನೆ. ನಾನೇನು ಮುಚ್ಚಿ ಇಡೋದಕ್ಕೆ ಆಗಲ್ಲ. ಅದರ ಅಂತಿಮ ವರದಿ ನೋಡುತ್ತೇನೆ ಎಂದು ಹೇಳಿದರು.

ಮಂಗಳೂರು ಆಸಿಡ್‌ ವಿಚಾರ ಈಗಾಗಲೇ ಕ್ರಮ ಕೈಗೊಂಡಿದ್ದಾರೆ. ಮಂಗಳೂರು ಆಸಿಡ್‌ ವಿಚಾರ ಈಗಾಗಲೇ ಕ್ರಮ ಕೈಗೊಂಡಿದ್ದಾರೆ. ಅದು ’ಗರ್ಲ್ ಫ್ರೆಂಡ್, ಬಾಯ್ ಫ್ರೆಂಡ್’ ನಡುವಿನ ಸಮಸ್ಯೆ ಅದೇನೋ ಅಫೈರ್. ಪೊಲೀಸ್ ಪ್ರಕಟಣೆಯ ಕಾಫಿ ನೋಡಿ ಇದು ಅಧಿಕೃತನಾ ಎಂದು ಪರಮೇಶ್ವರ್ ಪ್ರಶ್ನೆ ಮಾಡಿದರು. ಅದರ ಮೇಲೆ ನಾನು ಅವಲಂಬನೆ ಆಗೋದಕ್ಕೆ ಆಗಲ್ಲ. ಪಾಕಿಸ್ತಾನ್ ಜಿಂದಾಬಾದ್ ಅಲ್ಲ ನಾಸಿರ್ ಸಾಬ್ ಜಿಂದಾಬಾದ್ ಎಂದು ಯಾರೋ ಸಚಿವರು ಸಮರ್ಥನೆ ಮಾಡಿಕೊಂಡಿರಬಹುದು. ನಾನು ಹೇಳಿದ್ನಾ ಅಥವಾ ಮುಖ್ಯಮಂತ್ರಿಗಳು ಹೇಳಿದ್ದಾರೆ. ಯಾರೋ ಹೇಳಿದ್ದಾರೆ. ಅಧಿಕೃತ ಯಾವುದು ಅಂದರೆ ಮುಖ್ಯಮಂತ್ರಿಗಳು, ಗೃಹ ಸಚಿವರು, ಡಿಜಿ -ಐಜಿ ಹೇಳಿರುವುದು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು.

Comments (0)

Your email address will not be published. Required fields are marked *

Back to top button