ರಾಜ್ಯಸುದ್ದಿ

ಕಾಲು ಜಾರಿ ಹೊಂಡಕ್ಕೆ ಬಿದ್ದು ಗಂಡ, ಹೆಂಡತಿ ಮತ್ತು ಮಗಳ ಸಾವು

ಕಾಲು ಜಾರಿ ಹೊಂಡಕ್ಕೆ ಬಿದ್ದು ಗಂಡ ಹೆಂಡತಿ ಮತ್ತು ಮಗಳ ಸಾವನ್ನಪ್ಪಿದ ಘಟನೆ ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿ ಕರಿಬೀರನಹೊಸಹಳ್ಳಿ ಗ್ರಾಮದಲ್ಲಿ ಜರುಗಿದೆ.

ಕೈ ತೊಳೆಯಲು ಹೋಗಿ ಕಾಲು ಜಾರಿ ಬಿದ್ದು ಮೂವರ ಸಾವು ಸಾಧ್ಯತೆ ಇದ್ದು, ಒಬ್ಬರನ್ಬೊಬ್ಬರು ರಕ್ಷಿಸಲು ಹೋಗಿ ಕೃಷಿಹೊಂಡದಲ್ಲಿ ಬಿದ್ದು ಮೂವರು ಜೀವ ಬಲಿಯಾಗಿದ್ದಾರೆ. ಗಂಡ- ಮರಿಯಪ್ಪ(65) ಹೆಂಡತಿ-ಮುನಿಯಮ್ಮ(60)ಮಗಳು- ಭಾರತಿ 40 ಸಾವನ್ನಪ್ಪಿದ್ದಾರೆ.

ಕರಿಬೀರನಹೊಸಹಳ್ಳಿ ಸಮೀಪ ಉತ್ಸವ ನಡೆಯುತ್ತಿತ್ತು. ಕಾರ್ಯಕ್ರಮಕ್ಕೆ ಹೋಗಿ‌ ಬರುವಾಗ ಕೈತೊಳೆಯಲು ಹೋಗಿ ದುರಂತ ಅಂತ್ಯ ಕಂಡಿದೆ. ಮೃತರ ಶವಗಳನ್ನು ಸ್ಥಳೀಯರು ಹೊರಕ್ಕೆ ತೆಗೆದಿದ್ದಾರೆ. ಸ್ಥಳಕ್ಕೆ ಹೊಸಕೋಟೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

Comments (0)

Your email address will not be published. Required fields are marked *

Back to top button