ಜನಸಾಮಾನ್ಯರ ದನಿಜಿಲ್ಲೆ

ಐದನೇ ದಿನಕ್ಕೆ ಕಾಲಿಟ್ಟ ವಿದ್ಯುತ್ ಗುತ್ತಿಗೆದಾರರ ಪ್ರತಿಭಟನೆ

ಬೆಳಗಾವಿ : ಬೆಳಗಾವಿಯಲ್ಲಿ ಪ್ರತಿಭಟನೆಯ ಬಿಸಿ 5 ನೇ ದಿನವೂ ಮುಂದುವರೆದಿದೆ. ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಪ್ರತಿಭಟನೆ ನಡೆಸಲಾಗಿದೆ. ರಾಜ್ಯ ಸರ್ಕಾರ ಹಾಗೂ ಇಂಧನ ಸಚಿವರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.

ರೈತರ ನೀರಾವರಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವ ಯೋಜನೆಗೆ ಬಜೆಟ್ ಒದಗಿಸಿ ಕೆಲಸ ಪ್ರಾರಂಭಿಸಲು ಆಗ್ರಹಿಸಿದರು. ಗೃಹ ಜ್ಯೋತಿಯಿಂದ ಫೀಡರ್ ಪ್ರಾಂಚಾಯಿಜಿ ಗುತ್ತಿಗೆದಾರರಿಗೆ ಸಂಬಳ ಕೊಡೋದು ಕಷ್ಟ. ಶೂನ್ಯ ಬಿಲ್ ಲೆಕ್ಕಕ್ಕೆ ಪಡೆದು ಬಿಲ್ ಸಂದಾಯ ಮಾಡಲು ಆಗ್ರಹಿಸಿದ್ದಾರೆ. ಹೆಸ್ಕಾಂ ಸಾಫ್ಟ್‌ವೇರ್ ಆನ್ಲೈನ್ ಸೇವೆ ಕುಂಠಿತ ಸರಿಪಡಿಸಬೇಕು. ವಾಹನಗಳ ಹೊರಗುತ್ತಿಗೆ ಆಧಾರದ ಪ್ಯಾಕೇಜ್ ಟೆಂಡರ್ ರದ್ದುಪಡಿಸಿ ಸ್ಥಳೀಯ ಗುತ್ತಿಗೆದಾರರಿಗೆ ಕೆಲಸ ನೀಡಬೇಕು. ಟೆಂಡರ್ ಗಳನ್ನು ಮ್ಯಾನ್ ಪವರ್ ಏಜೆನ್ಸಿ ಬದಲಿಗೆ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರಿಗೆ ಅವಕಾಶ ಕಲ್ಪಿಸಲು ಆಗ್ರಹಿಸಿದರು.

Comments (0)

Your email address will not be published. Required fields are marked *

Back to top button