ಜಿಲ್ಲೆ

ಬೆಸ್ಕಾಂ ವತಿಯಿಂದ ಜಾಗೃತಿ ಕಾರ್ಯಕ್ರಮ

ಬೆಂಗಳೂರು : ನಗರದಲ್ಲಿ ವಿದ್ಯುತ್ ಅಪಘಾತ ತಡೆಯಲು ಇಂದು ಬೆಸ್ಕಾಂ (ವಿಧಾನಸೌಧ ವಿಭಾಗ) ವತಿಯಿಂದ ವಿದ್ಯುತ್ ಅಪಘಾತ ತಡೆಯುವ ಸಪ್ತಾಹ ಕಾರ್ಯಕ್ರಮ ನಡೆಯಿತು.

ಜನರಲ್ಲಿ ವಿದ್ಯುತ್ ನಿಂದಾಗುವ ಅಪಘಾತಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು. ಅಪಘಾತ ಸಂಭವಿಸುವ ಸನ್ನಿವೇಶಗಳು ಕಂಡುಬಂದಲ್ಲಿ ತಕ್ಷಣ ಬೆಸ್ಕಾಂ ಸಹಾಯವಾಣಿ 1912 ಗೆ ಕರೆ ಮಾಡಿ ಎಂದು ಬೆಸ್ಕಾಂ ವಿಧಾನಸೌಧ ವಿಭಾಗದ ಎಕ್ಸಿಕ್ಯುಟಿವ್ ಇಂಜಿಯರ್ ಅಮರ್ ನಾಥ್ ರೆಡ್ಡಿ ತಿಳಿಸಿದರು. ಇನ್ನೂ ಬೆಸ್ಕಾಂ ಸಿಬ್ಬಂದಿಗಳು ರಸ್ತೆಯಲ್ಲಿ ಕಾಲ್ನಡಿಗೆ ಮೂಲಕ ‘ಬೆಸ್ಕಾಂ ಆಸ್ತಿ ಸಾರ್ವಜನಿಕರ ಆಸ್ತಿ’ ಎಂಬ ಬರಹದ ಭಿತ್ತಿಪತ್ರ ಹಿಡಿದು ಜನರಲ್ಲಿ ಜಾಗೃತಿ ಮೂಡಿಸಿದರು.

Comments (0)

Your email address will not be published. Required fields are marked *

Back to top button