ಜಿಲ್ಲೆಧರ್ಮ

ಯಾರೇ ಆಗಲಿ ಧಾರ್ಮಿಕವಾಗಿ ಮಾತನಾಡಬಾರದು : ಎ.ಎಮ್.ಹಿಂಡಸಗೇರಿ

ಹುಬ್ಬಳ್ಳಿ : ಬಸವರಾಜ ಪಾಟೀಲ್ ಯತ್ನಾಳ ಹುಚ್ಚರಂತೆ ವರ್ತನೆ ಮಾಡುತ್ತಿದ್ದಾರೆ ಈ ವಿಷಯ ಕೇಳಿ ನನಗೆ ಬಹಳ ಆಶ್ಚರ್ಯ ಆಗಿದೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಮತ್ತು ಮುಸ್ಲಿಂ ಧರ್ಮಗುರುಗಳ ಸಮಾವೇಶದ ಉಸ್ತುವಾರಿ ಎ.ಎಮ್.ಹಿಂಡಸಗೇರಿ ಕಿಡಿಕಾರಿದರು.

ಯತ್ನಾಳ ಅವರ ಹೇಳಿಕೆ ಸಣ್ಣ ವಿಷಯ ಅಲ್ಲ. ಸರ್ಕಾರದ ಎಲ್ಲಾ ಜನ ಪ್ರತಿನಿಧಿಗಳು ಬಂದಿದ್ರು. ಯತ್ನಾಳ ಅವರ ಮನಸ್ಸು ಸ್ಥಿರವಾಗಿಲ್ಲ, ಅವರ ಪಕ್ಷದ ವಿರುದ್ದವೇ ಯತ್ನಾಳ ಅವರು ಮನಸ್ಸಿಗೆ ಬಂದ ಹಾಗೆ ಮಾತನಾಡುತ್ತಾರೆ. ಐಸ್ ಉಗ್ರರ ಜೊತೆಗೆ ನಂಟು ಇದ್ದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಸತ್ಯಕ್ಕೆ ದೂರವಾದದ್ದು, ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ ಎಂದು ಎ.ಎಮ್.ಹಿಂಡಸಗೇರಿ ಹೇಳಿದರು.

ಯತ್ನಾಳ್​​ ಅವರಿಗೆ ಒಳ್ಳೆ ಬುದ್ಧಿ ಕೊಡಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡ್ತೀನಿ. ರಾಜಕೀಯವಾಗಿ ಮಾತನಾಡಲಿ, ಆದ್ರೆ ಧಾರ್ಮಿಕವಾಗಿ ಮಾತನಾಡೋದು ಸರಿಯಲ್ಲ. ಅಲ್ಲಿ ಅನೇಕ ಗುರುಗಳು ಬಂದು ಎಲ್ಲಾ ಧರ್ಮಗಳಲ್ಲಿ ಶಾಂತಿ ನೆಲೆಸಬೇಕು ಅನ್ನೋ ಉದ್ದೇಶದಿಂದ ಮಾಡಿದ್ವಿ, ನಮ್ಮಲ್ಲಿ ಶೈಕ್ಷಣಿಕವಾಗಿ ಅಲ್ಪಸಂಖ್ಯಾತರೂ ಹಿಂದುಳಿದಿದ್ದಾರೆ ಎಂದರು. ಯಾರೇ ಆಗಲಿ ಧಾರ್ಮಿಕವಾಗಿ ಮಾತನಾಡಬಾರದು. ಸಾವಿರಾರು ಮಂದಿ ಎಲ್ಲಾ ಧರ್ಮದವರು ಸೇರಿ ಸಮಾವೇಶ ಮಾಡಿದ್ದೇವೆ. ನಾವೆಲ್ಲಾ ಅದಕ್ಕೆ ಪ್ರೋತ್ಸಾಹ ಕೊಡಬೇಕು, ಇಂತಹ ಮಾತನ್ನು ಆಡಬಾರದು ಎಂದು ಯತ್ನಾಳ್​ ವಿರುದ್ಧ ಎ.ಎಮ್.ಹಿಂಡಸಗೇರಿ ಆಕ್ರೋಶ ಹೊರಹಾಕಿದರು.

Comments (0)

Your email address will not be published. Required fields are marked *

Back to top button