ಬ್ರಾಂಡ್ ಬೆಂಗಳೂರು ಬಗ್ಗೆ ಮಾತಾಡುವ ನೈತಿಕತೆ ಅವರಿಗಿಲ್ಲ ( ಬಿಜೆಪಿ) : ಸಿಎಂ ಸಿದ್ದರಾಮಯ್ಯ

ಬೆಳಗಾವಿ : ಬ್ರಾಂಡ್ ಬೆಂಗಳೂರು ವಿಚಾರಕ್ಕೆ ಬಿಜೆಪಿ ವಿರುದ್ದ ಸಿಎಂ ಸಿದ್ದರಾಮಯ್ಯ ಹರಿಹಾಯ್ದಿದಿದ್ದಾರೆ. ಬಿಜೆಪಿ ಕಾಲದಲ್ಲಿ ಗುಂಡಿ ಮುಚ್ಚುವುದಕ್ಕೆ ಹೈ ಕೋರ್ಟ್ ಛೀಮಾರಿ ಹಾಕಿತ್ತು. ಇವರು ಏನ್ ಮಾಡಿದರೂ ಬೆಂಗಳೂರಿನ ಗುಂಡಿ ಮುಚ್ಚುಕ್ಕೆ ಆಗಿಲ್ಲ ಅವರಿಗೆ ಎಂದು ವಾಗ್ದಾಳಿ ನಡೆಸಿದರು. ಹೈ ಕೋರ್ಟ್ ನವರು ಉಗಿಯುತ್ತಿದ್ದರು, ಟೀಕೆ ಮಾಡುತ್ತಿದ್ದರು ಬ್ರಾಂಡ್ ಬೆಂಗಳೂರು ಬಗ್ಗೆ ಮಾತಾಡುವ ನೈತಿಕತೆ ಅವರಗಿಲ್ಲ ಎಂದರು.

ಇನ್ನೂ ಸದನಕ್ಕೆ ಸಚಿವರು ಗೈರಾದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಎಲ್ಲರೂ ಕೂತಿಲ್ಲ ಇಬ್ಬರೂ ಮಾತ್ರ ಹೋಗಿದ್ದಾರೆ. ಮುನಿಯಪ್ಪ ಜಾರ್ಜ್ ಸೇರಿ ಎಲ್ಲರು ವಾಪಸ್ಸ ಬಂದಿದ್ದಾರೆ. ರಾಜಕೀಯನೂ ಮಾಡಬೇಕಲ್ಲಪ್ಪ ಎಂದು ಸಿಎಂ ಮರು ಪ್ರಶ್ನೆ ಮಾಡಿದರು. ಮುಖ್ಯಮಂತ್ರಿಯಿಂದ ಮುಸ್ಲಿಂ ತುಷ್ಟಿಕರನ ರಾಜಕೀಯ ವಿಚಾರವಾಗಿ ಎಲ್ಲ ನಿಮ್ಮಿಂದ ಉಂಟಾಗಿದ್ದು, ಕುಮಾರಸ್ವಾಮಿ ಹೇಳಿದ್ದಕ್ಕೆ ನಾನು ಉತ್ತರ ಕೊಡುತ್ತೇನೆ ಎಂದರು. ನಾನು ಎಲ್ಲ ಸಮುದಾಯಕ್ಕೆ ಕೊಡುತ್ತೇನೆ ಎಂದು ಹೇಳಿದ್ದನ್ನ ಬರೆದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.




