ರಾಜಕೀಯರಾಜ್ಯಸುದ್ದಿ

ಲೋಕಸಭಾ ಚುನಾವಣೆ ; ನೋಡಲ್ ಅಧಿಕಾರಿಗಳ ನೇಮಕ

ಮಂಡ್ಯ : ಮುಂಬರುವ ಲೋಕಸಭಾ ಚುನಾವಣೆ ಸಂಬಂಧ ಜಿಲ್ಲೆಯಲ್ಲಿ ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದ್ದು, ಚುನಾವಣೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಕುಮಾರ ತಿಳಿಸಿದರು.

ಅವರು ಶನಿವಾರ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ನೋಡಲ್ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಲೋಕಸಭಾ ಚುನಾವಣಾ ಸಂಬಂಧ ಜಿಲ್ಲೆಯಲ್ಲಿ ಒಟ್ಟು 16 ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ನೋಡಲ್ ಅಧಿಕಾರಿಗಳು ಚುನಾವಣೆ ಕೆಲಸಗಳಲ್ಲಿ ಭಾಗವಹಿಸುವ ಅಧಿಕಾರಿಗಳು ಸಮನ್ವಯದಿಂದ ಕೆಲಸ ನಿರ್ವಹಿಸಿ ಎಂದರು.

ಸ್ವೀಪ್ ಹಾಗೂ ಎಂಸಿಸಿ ಸಮಿತಿ – ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ, ಕಾನೂನು ಸುವ್ಯವಸ್ಥೆ, ರಕ್ಷಣೆ ಸಮಿತಿ- ಪೊಲೀಸ್ ವರಿಷ್ಠಾಧಿಕಾರಿ, ಮಾನವ ಸಂಪನ್ಮೂಲ- ಭೂದಾಖಲೆ ಇಲಾಖೆಯ ಉಪನಿರ್ದೇಶಕರು, ಚುನಾವಣೆ ತರಬೇತಿ- ಡಯಟ್ ಪ್ರಾಂಶುಪಾಲರು, ಸಂಪನ್ಮೂಲ ನಿರ್ವಹಣೆ- ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಸಾರಿಗೆ ವ್ಯವಸ್ಥೆ- ಪ್ರಾದೇಶಿಕ ಸಾರಿಗೆ ಅಧಿಕಾರಿ, ಸೈಬರ್, ವೆಬ್‌ಸೈಟ್- ಎನ್.ಐ.ಸಿ ಅಧಿಕಾರಿ, ಇವಿಎಂ ನಿರ್ವಹಣೆ- ಸಮಾಜ ಕಲ್ಯಾಣಾಧಿಕಾರಿ, ಚುನಾವಣಾ ವೆಚ್ಚ ಮೇಲ್ವಿಚಾರಣೆ- ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿ, ಬ್ಯಾಲೆಟ್ ಮತ್ತು ಪೊಸ್ಟಲ್ ಬ್ಯಾಲೆಟ್- ಮಿಮ್ಸ್ ಆಡಳಿತಾಧಿಕಾರಿ, ಪೇಯ್ಡ್‌ ನ್ಯೂಸ್ ಹಾಗೂ ಮಾಧ್ಯಮ ಸಮನ್ವಯ – ವಾರ್ತಾಧಿಕಾರಿ, ಸಂವಾಹನ ಯೋಜನೆ- ಕೃಷಿ ಇಲಾಖೆಯ ಜಂಟಿ ನಿರ್ದೇಶಕ, ಮತದಾನ ಪ್ರಕ್ರಿಯೆ- ಉಪ ವಿಭಾಗಾಧಿಕಾರಿಗಳು, ಚುನಾವಣಾ ಸಂಬಂಧ ದೂರು ಕೋಶ- ತೋಟಗಾರಿಕೆಯ ಉಪ ನಿರ್ದೇಶಕರು, ಚುನಾವಣಾ ವೀಕ್ಷಕರರ ಸಮನ್ವಯ- ಲೋಕೋಪಯೋಗಿ ಇಲಾಖೆ ಕಾರ್ಯಾಪಾಲಕ ಅಭಿಯಂತರ ಸೇರಿದಂತೆ ಒಟ್ಟು 16 ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶೇಖ್ ತನ್ವಿರ್ ಆಸಿಫ, ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗರಾಜು ಸೇರಿದಂತೆ ಚುನಾವಣಾ ನೊಡಲ್ ಅಧಿಕಾರಿಗಳು ಇದ್ದರು.

Comments (0)

Your email address will not be published. Required fields are marked *

Back to top button