ಜಿಲ್ಲೆ

ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಕ್ಲಾಸ್

ಚಿತ್ರದುರ್ಗ : ಸರ್ಕಾರ ಎಲ್ಲಾ ಅಧಿಕಾರಿಗಳಿಗೂ ವೇತನ ನೀಡುತ್ತದೆ. ಅದಕ್ಕೆ ತಕ್ಕಂತೆ ನಿಷ್ಠೆ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಚಿತ್ರದುರ್ಗದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಕೆಡಿಪಿ ಸಭೆಯಲ್ಲಿ ಖಡಕ್​ ಆಗಿ ಸೂಚಿಸಿದರು.

ಬಡವರಿಗೆ ತಲುಪಬೇಕಾದ ಸೌಲಭ್ಯಗಳಲ್ಲಿ  ಸ್ವಲ್ಪ ಹೆಚ್ಚು ಕಡಿಮೆ ಆದರೂ ನನ್ನಷ್ಟು ಕೆಟ್ಟ ಮನುಷ್ಯ ಬೇರ್ಯಾರಿಲ್ಲ. ನಿಮ್ಮ ವರದಿ ಓದಿಕೊಂಡು‌ ಬಂದಿದ್ದೇನೆ ಎಂದರು. ಕೆಲ ಇಲಾಖೆಗಳ ಪ್ರಗತಿಯಾಗಿಲ್ಲ ಯಾಕೆ ? ಎಂದು ಅಧಿಕಾರಿಗಳಿಗೆ ಅಮ್ಲಾನ್ ಆದಿತ್ಯ ಬಿಸ್ವಾಸ್ ಪ್ರಶ್ನಿಸಿದರು. ಜಿಲ್ಲೆಯ ಎಲ್ಲಡೆ ಓಡಾಡಿದ್ದು ಸಮಸ್ಯೆ ಗೊತ್ತಿದೆ ಅದಕ್ಕೆ ತಕ್ಕಂತೆ ಕೆಲಸ ಮಾಡಿ ಎಂದು ಹೇಳಿದರು.

Comments (0)

Your email address will not be published. Required fields are marked *

Back to top button