ಜಿಲ್ಲೆರಾಜಕೀಯರಾಜ್ಯ

ಬಿಜೆಪಿ ಕಾರ್ಯ ಕಾರಿಣಿಯಲ್ಲಿ ಯಡಿಯೂರಪ್ಪ ಏನಂದ್ರು?

ಬೆಂಗಳೂರು :  ಈ ವರ್ಷದ ಪ್ರಥಮ ರಾಜ್ಯಕಾರಿಣಿ ಸಭೆ ಇದಾಗಿದ್ದು ಭಾರತೀಯರ ಐದು ಶತಮಾನದ ಕನಸು ರಾಮಮಂದಿರ ನಿರ್ಮಾಣವಾಗಿದೆ. ನರೇಂದ್ರ ಮೋದಿ ಅವರ ಕಾಲದಲ್ಲಿ ರಾಮಮಂದಿರ ಆಗಿರೋದು ಪಕ್ಷ ಹಾಗೂ ದೇಶಕ್ಕೆ ಹೆಮ್ಮೆ. ಲೋಕಸಭೆ ಚುನಾವಣೆ ಮುಂದೆ ಇರುವ ಅತೀ ದೊಡ್ಡ ಟಾಸ್ಕ್. ಈ ಬಾರಿ 28 ಕ್ಷೇತ್ರ ಗೆಲ್ಲಬೇಕು. ಜಗದೀಶ್ ಶೆಟ್ಟರ್ ಬಿಜೆಪಿಗೆ ಸೇರಿರೋದು ಶಕ್ತಿ ಸಿಕ್ಕಿದೆ.

ಜನರಿಗೆ ವಾಸ್ತವವನ್ನು ತಿಳಿಸಬೇಕಾಗಿದೆ. ಸರ್ಕಾರದ ಸಮಸ್ಯೆಗಳನ್ನು ಜನರಿಗೆ ತೋರಿಸಬೇಕು. ಜನರ ಪರ, ರಾಜ್ಯದ ಪರ ಹೋರಾಟ ಮಾಡೋಣ. ಮೋದಿಯವರ ಕಾರ್ಯಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು. ಮೋದಿಯರವರನ್ನು ಮತ್ತೆ ಪ್ರಧಾನಿ ಮಾಡಬೇಕು ಎಂದು ಬಿಎಸ್ ಯಡಿಯೂರಪ್ಪ ಕಾರ್ಯಕರ್ತರನ್ನು ಪಕ್ಷದ ಮುಖಂಡರಿಗೆ ಬಲ ತುಂಬುವಂತಹ ಭಾಷಣ ಮಾಡಿದ್ರು .

Comments (0)

Your email address will not be published. Required fields are marked *

Back to top button