ಆರೋಗ್ಯಜಿಲ್ಲೆ

ನಿಮ್ಹಾನ್ಸ್ ಬಯಾಪ್ಸಿ ಕಳ್ಳರಿಗೆ ಪೊಲೀಸ್ ಬಲೆ

ಬೆಂಗಳೂರು : ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿದ್ದ ರೋಗಿಗಳಿಗೆ ಮಿದುಳು ಟ್ಯೂಮರ್ ಬಯಾಪ್ಸಿ ಸ್ಯಾ೦ಪಲ್ಸ್ಗಳನ್ನ ಕದ್ದು ಅಕ್ರಮವಾಗಿ ಮಾರಾಟ ಮಾಡಿದ್ದ ಪ್ರಕರಣದ ತನಿಖೆಯನ್ನ ಸಿದ್ಧಾಪುರ ಪೊಲೀಸರು ಚುರುಕುಗೊಳಿಸಿದ್ದಾರೆ.
ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳ ರೋಗ ಲಕ್ಷಣ ತಿಳಿಯಲು ಸಂಗ್ರಹಿಸಿದ್ದ ಬಯಾಪ್ಸಿ ಸ್ಯಾಂಪಲ್ಸ್ ಕಳ್ಳತನವಾಗಿದೆ ಎಂದು ಹೇಳಲಾಗುತ್ತಿದ್ದ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ. ನಿಮ್ಹಾನ್ಸ್ ನಿಂದ ಅಕ್ರಮವಾಗಿ ಬಯಾಪ್ಸಿಯನ್ನ ಕೇರಳದ ಖಾಸಗಿ ಮೆಡಿಕಲ್​​​ ಕಾಲೇಜು, ಸಂಸ್ಥೆಗಳಿಗೆ ಸಂಪರ್ಕ ಮಾಡಿ ಮಾರಾಟ ಮಾಡಲಾಗಿದೆ ಎಂಬ ಅಂಶ ಬಟಾ ಬಯಲಾಗಿದೆ.

ಏನಿದು ಬಯಾಪ್ಸಿ ಸ್ಯಾಂಪಲ್ಸ್?

ಮಾನಸಿಕ ಅಸ್ವಸ್ಥ ರೋಗಿಗಳು ಮತ್ತು ನರರೋಗ ಚಿಕಿತ್ಸೆ ಪಡೆಯಲು ನಿಮ್ಹಾನ್ಸ್ ಆಸ್ಪತ್ರೆಗೆ ದೇಶದ ವಿವಿಧ ಭಾಗಗಳಿಂದ ರೋಗಿಗಳು ಬರುತ್ತಾರೆ. ಈ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರ ತಂಡ, ರೋಗ ಲಕ್ಷಣ ಮತ್ತು ಕಾರಣ ತಿಳಿಯಲು ರೋಗಿಗಳ ಬಯಾಪ್ಸಿ ಮಾದರಿ ಸಂಗ್ರಹಿಸಿ ಸಂಶೋಧನೆ ನಡೆಸುತ್ತದೆ. ಬಯಾಪ್ಸಿ ಮಾದರಿಯಲ್ಲಿ ರೋಗಕ್ಕೆ ಸಂಬಂಧಿಸಿದ ಮಾಹಿತಿ ಇರುತ್ತದೆ. ಪ್ರತಿವರ್ಷ ಅಂದಾಜು 1 ಸಾವಿರ ಬಯಾಪ್ಸಿ ಮಾದರಿ ಪಡೆದು ಶವಾಗಾರದಲ್ಲಿ ಸಂಗ್ರಹಿಸಲಾಗುತ್ತದೆ.

ನಿಮ್ಹಾನ್ಸ್ ಆಸ್ಪತ್ರೆಯ ಬಯಾಪ್ಸಿ ಸ್ಯಾಂಪಲ್ಸ್ ಕಳ್ಳತನದ ಬಗ್ಗೆ ನಿಮ್ಹಾನ್ಸ್ ಆಸ್ಪತ್ರೆಯ ರಿಜಿಸ್ಟ್ರಾರ್ ಡಾ. ಶಂಕರ ನಾರಾಯಣ ರಾವ್ ಅವರು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ಆಸ್ಪತ್ರೆಯ ನ್ಯೂರೋಪೆಥಾಲಜಿ ವಿಭಾಗದ ನ್ಯೂರೋ ಆಂಕಾಲಜಿ ಲ್ಯಾಬ್‌ನ ಟೆಕ್ನಿಷಿಯನ್ ಎಂ.ಆರ್. ಚಂದ್ರಶೇಖರ್ ಮತ್ತು ಶವಾಗಾರ ಸಹಾಯಕ ಎಸ್. ಅಣ್ಣಾ ದೊರೈ ಮತ್ತು ಕೇರಳದ ರಘುರಾಮ್ ಸೇರಿದಂತೆ ಇತರರ ವಿರುದ್ಧ ಎಫ್​ಐಆರ್ ಕೂಡ ದಾಖಲಾಗಿತ್ತು. ಸದ್ಯ ಪೊಲೀಸರ ತನಿಖೆ ವೇಳೆ ಕೇರಳದ ಖಾಸಗಿ ಮೆಡಿಕಲ್​​​ ಕಾಲೇಜು, ಸಂಸ್ಥೆಗಳಿಗೆ ಸ್ಯಾಂಪಲ್ಸ್ ಮಾರಾಟ ಮಾಡಲಾಗಿರುವ ಸಂಗತಿ ಬಯಲಾಗಿದೆ.

ಕೇರಳದ ಖಾಸಗಿ ಮೆಡಿಕಲ್​​​ ಕಾಲೇಜು, ಸಂಸ್ಥೆಗಳಿಗೆ ಸಂಪರ್ಕ ಮಾಡಿ ಮಾರಾಟ ಮಾಡಲಾಗಿದೆ ಎಂಬ ಅಂಶ ಬಯಲಾಗಿದೆ. ಎರಡ್ಮೂರು ವರ್ಷಗಳಿಂದ ಇದೇ ರೀತಿ ಸ್ಯಾಂಪಲ್ಸ್ ಮಾರಾಟ ಮಾಡಿರೋದು ತನಿಖೆ ವೇಳೆ ಪತ್ತೆಯಾಗಿದೆ. ಸಿದ್ದಾಪುರ ಪೊಲೀಸರು ನಿಮಾನ್ಸ್ ಆಸ್ಪತ್ರೆಗೆ ಆಡಿಟಿಂಗ್ ರಿಪೋರ್ಟ್ ಕೇಳಿಸಿದ್ದಾರೆ. ಆದರೆ ಪೊಲೀಸರಿಗೆ ಆಡಿಟಿಂಗ್ ರಿಪೋರ್ಟ್ ಕೊಡಲು ನಿಮ್ಹಾನ್ಸ್ ಸಿಬ್ಬಂದಿ ಮೀನಾಮೇಷ ಎಣಿಸುತ್ತಿದ್ದಾರೆ.
ನಿಮಾನ್ಸ್ ನಲ್ಲಿ ಕೆಲಸ ಮಾಡುವ ಇನ್ನೂ ಕೆಲವರು ಪ್ರಕರಣದಲ್ಲಿ ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿದೆ.

ಕೆಲಸ ಮಾಡುತ್ತಿದ್ದವರಿಂದಲೇ ನಿಮಾನ್ಸ್ ಆಸ್ಪತ್ರೆಯಲ್ಲಿ ಬಯಾಪ್ಸಿ ಸ್ಯಾಂಪಲ್ಸ್ ಕಳ್ಳತನವಾಗಿದೆ. ಸಿದ್ದಾಪುರ ಪೊಲೀಸರು ಇಬ್ಬರು ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆದಿದ್ದಾರೆ. ಅಣ್ಣಾ ದೊರೈ ಮತ್ತು ಚಂದ್ರಶೇಖರ್ ಅವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಕರೆದಿದ್ದಾರೆ. ಶವಾಗಾರದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡ್ತಿದ್ದ ಅಣ್ಣಾದೊರೈ ಹಾಗೂ ಚಂದ್ರಶೇಖರ್ ಬಯಾಪ್ಸಿ ಸ್ಯಾಂಪಲ್ಸ್ ಕದ್ದು ಕೇರಳದ ರಘುರಾಮ್ ಎಂಬಾತನಿಗೆ ಮಾರಾಟ ಮಾಡಿದ್ದರು. ನಿಮಾನ್ಸ್ ನಲ್ಲಿ ಕೆಲ ವಿಭಿನ್ನ ಬಯಾಪ್ಸಿ ಸ್ಯಾಂಪಲ್ಸ್​ಗಳಿಗೆ ಕೇರಳದಿಂದ ಬೇಡಿಕೆ ಇದೆ. ನಿಮಾನ್ಸ್ ಎಚ್ ಒಡಿ ಡಾ.ಅನಿತಾ ಮಹದೇವಯ್ಯ ಅವರು ಶವಾಗಾರಕ್ಕೆ ಭೇಟಿ ಕೊಟ್ಟಾಗ ಕಳ್ಳತನ ಬೆಳಕಿಗೆ ಬಂದಿತ್ತು.

 

Comments (0)

Your email address will not be published. Required fields are marked *

Back to top button