ರಾಜ್ಯಸುದ್ದಿ

ಕಳಪೆ ಬೀಜ ಪೂರೈಕೆ ಮಾಡಿದ ಕಂಪನಿಗಳ ವಿರುದ್ಧ ರೈತರ ಪ್ರತಿಭಟನೆ

ಬಾಗಲಕೋಟೆ : ಬಾಗಲಕೋಟೆಯಲ್ಲಿ ಕಳಪೆ ಬೀಜ ಪೂರೈಕೆ ಮಾಡಿದ ಕಂಪನಿಗಳ ವಿರುದ್ಧ ರೈತರು ಪ್ರತಿಭಟನೆ ನಡೆಸಿದರು.

ಕಳಪೆ ಬೀಜ ಪೂರೈಸಿರುವ ಬಾಗಲಕೋಟೆಯ ಕಿರಣ ಹಾಗೂ ಕಿಸಾನ್ ಸೀಡ್ಸ್ ಹೌಸ್ ವಿರುದ್ಧ ರೈತರು ಆರೋಪ ಮಾಡಿದ್ದಾರೆ. ಯಾದಗಿರಿ ಹುಣಸಗಿ ತಾಲೂಕಿನ ಮುದನೂರು ಗ್ರಾಮದ ಬಸನಗೌಡ ಪೋತರೆಡ್ಡಿ ಅವರು ಮೆನಸಿನ ಕಾಯಿ ಬೀಜವನ್ನು ಖರೀದಿಸಿದ್ದರು. ಹನ್ನೆರಡು ಸಾವಿರ ರೂಪಾಯಿಗಳಿಗೆ ಆರು ಪ್ಯಾಕೆಟ್’ಗಳನ್ನು ರೈತ ಖರೀದಿಸಿದ್ದ, ಆದ್ರೆ ಗಿಡದಲ್ಲಿ ಮೆನಸಿನ ಕಾಯಿಗಳು ಬಿಡದೇ ಇರೋದ್ರಿಂದ ಆರ್ಥಿಕವಾಗಿ ರೈತ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಖಂಡ ಕರ್ನಾಟಕ ರೈತ ಸಂಘದಿಂದ ಕಂಪನಿಗಳ ವಿರುದ್ಧ ಆಕ್ರೋಶ‌ ಹೊರಹಾಕಿದ್ದು, ಕಂಪನಿಗಳ ವಿರುದ್ದ ಸೂಕ್ತ ಕ್ರಮಕ್ಕೆ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದರು.

ಅಖಂಡ ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ನೇತೃತ್ವದಲ್ಲಿ ಮನವಿ ಮಾಡಿದ್ದು, ಈಗಾಗಲೇ ಬಾಗಲಕೋಟೆಯ ತೋಟಗಾರಿಕಾ ವಿವಿ’ ವಿಜ್ಞಾನಿಗಳ ತಂಡ ಕಂಪನಿಗಳ ಪರವಾಗಿ ವರದಿ ನೀಡಿದೆ. ಬಡ ರೈತನಿಗೆ ಪರಿಹಾರ ಕೊಡುವಂತೆ ಒತ್ತಾಯಿಸಿದ್ದಾರೆ.

 

Comments (0)

Your email address will not be published. Required fields are marked *

Back to top button