ವರದಿ: ಕುಮಾರ್, ಕೋಲಾರ
ಕೋಲಾರ : ದಲಿತ , ಹಿಂದುಳಿದ ಹಾಗೂ ಅಲ್ಪಸಂಖ್ಯಾತ ರಿಗೆ ಸರ್ಕಾರದಿಂದ ಬರುವ ಸೌಲಬ್ಯಗಳ ಆಯ್ಕೆ ಅಧಿಕಾರವನ್ನು ಜನಪ್ರತಿನಿಧಿಗಳಿಂದ ಹಿಂಪಡೆಯಬೇಕು, ಸರ್ಕಾರಿ ಭೂ ಮಂಜುರಾತಿಯಲ್ಲಿ ಪಾರದರ್ಶಕತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರುಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ .
ಸರ್ಕಾರಿ ಸೌಲಬ್ಯಗಳನ್ನು ಬಡಜನರಿಗೆ ತಲುಪಿಸ ಬೇಕಾದ ಜನಪ್ರತಿನಿಧಿಗಳು ತಮ್ಮ ಬೆಂಬಲಿಗರಿಗೆ ಮಾತ್ರ ಸೌಲಬ್ಯಗಳನ್ನು ನೀಡುತ್ತಿದ್ದಾರೆ ನಿಜವಾದ ಬಡ ಜನರಿಗೆ ಅವಷ್ಯಕತೆ ಇರುವವರಿಗೆ ಸಿಗುತ್ತಿಲ್ಲ , ಭೂ ಮಂಜೂರಾತಿ ಸಮಿತಿ ನಿಯಮಗಳನ್ನು ಗಾಳಿಗೆ ತೂರಿ ಸಾಕಷ್ಟು ಭೂಮಿ ಹೊಂದಿರುವವರಿಗೆ ಮತ್ತೆ ಭೂಮಿ ಮಂಜೂರಾತಿ ಮಾಡಲಾಗುತ್ತಿದೆ, ಇನ್ನು ಗೋಮಾಳ , ಗುಂಡುತೋಪು, ಸೇರಿದಂತೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ನಕಲಿ ದಾಖಲೆ ಸೃಷ್ಟಿಸಿಕೊಂಡು ಒತ್ತುವರಿ ಮಾಡಿಕೊಂಡವರ ಮೇಲೆ ಕ್ರಮ ಜರುಗಿಸಬೇಕು, ಸರ್ಕಾರಿ ವಿದ್ಯಾರ್ಥಿ ನಿಲಯ ಗಳಲ್ಲಿ ಬೇರೆ ಇಲಾಖೆ ಅಧಿಕಾರಿಗಳ ನಿಯೋಜನೆ ನಿಲ್ಲಿಸಬೇಕು, ಹಸು ಮತ್ತು ಕುರಿಗಳ ಇನ್ಸೂರೆಸ್ಸ್ ಬಿಡುಗಡೆ, ಪಿಟಿಸಿಎಲ್ ಕೇಸ್ ಗಳಲ್ಲಿ ದಲಿತರ ಮೇಲಾಗುತ್ತಿರುವ ಅನ್ಯಾಯ ತಡೆಯುವುದು, ಜಿಲ್ಲೆಯ ಕೈಗಾರಿಕಾ ಪ್ರದೇಶಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಉದ್ದಿಮೆಗಳಿಗೆ ಉತ್ತೇಜನ ನೀಡುವುದು.
ಬಾಬಾ ಸಾಹೇಬ್ ಅಂಬೇಡ್ಕರ್ ಜಿಲ್ಲೆಗೆ ಭೇಟಿನೀಡಿದ ಸ್ಥಳಗಳಲ್ಲಿ ರಾಷ್ಟ್ರೀಯ ಸ್ಮಾರಕ, ಅಂಬೇಡ್ಕರ್ ಅದ್ಯಯನ ಕೇಂದ್ರ, ಗ್ರಂಥಾಲಯ ಗಳನ್ನು ನಿರ್ಮಿಸುವುದು, ಚನ್ನದಾಸರಿ ಮತ್ತು ಶಿಳ್ಳೇಖ್ಯಾತಿ ಜಾತಿಗಳಿಗೆ ಜಾತಿ ಪ್ರಮಾಣಪತ್ರ ನೀಡುವುದು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ದಲಿತರ ಕೇರಿ, ಶಾಲೆಗಳಿಗೆ ದಾರಿ ಒದಗಿಸಿಕೊಡಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಸೂಲಿಕುಂಟೆ ರಮೇಶ್, ಜಿಲ್ಲಾ ಸಂಚಾಲಕ ನಾಗನಾಳ ಮುನಿಯಪ್ಪ ಸೇರಿದಂತೆ ನೂರಾರು ಮಂದಿ ರಸ್ತೆ ಜಾತಾ ಮೂಲಕ ಆಗಮಿಸಿ ಜಿಲ್ಲಾಧಿಕಾರಿ ಅಕ್ರಂಪಾಷಾ ರವರಿಗೆ ಮನವಿ ಪತ್ರವಸಲ್ಲಿಸಿದ್ದಾರೆ.