ಕ್ರೈಂ ಸ್ಟೋರಿರಾಜ್ಯಸುದ್ದಿ

ಪಾಳು ಮನೆಯಲ್ಲಿ ಭೀಕರ ಕೊಲೆ: ಭಾವಿ ಪತಿಯೇ ಅಪ್ರಾಪ್ತೆಯನ್ನು ಕೊಂದು ಪರಾರಿಯಾದ ಪ್ರಕರಣ..!

ಬೆಂಗಳೂರು : ಬೆಂಗಳೂರಿನ ಡಿ.ಜೆ.ಹಳ್ಳಿ ಸಕ್ಕರೆ ಮಂಡಿಯ ಪಾಳು ಮನೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಅಪ್ರಾಪ್ತೆಯನ್ನು ಆಕೆಯ ಭಾವಿ ಪತಿಯೇ ಭೀಕರವಾಗಿ ಕೊಲೆ ಮಾಡಿದ್ದ ಘಟನೆ ಬೆಳಿಗ್ಗೆ 6:30ರ ಸುಮಾರಿಗೆ ಸಂಭವಿಸಿದೆ. ಈ ಪ್ರಕರಣ ಬೆಳಿಗ್ಗೆ 11 ಗಂಟೆಗೆ ಪೊಲೀಸ್ ಅಧಿಕಾರಿಗಳಿಗೆ ತಿಳಿದು ಬಂದಿದೆ.

ಆರೋಪಿ ಶಬೀಲ್ (20) ಪರಾರಿಯಾಗಿದ್ದು, ಕುಟುಂಬ ಸದಸ್ಯರ ಸಹಾಯದಿಂದ ಪ್ರಕರಣ ಬೆಳಕಿಗೆ ಬಂದಿದೆ. ಡಿ.ಜೆ.ಹಳ್ಳಿ ಠಾಣೆ ಪೊಲೀಸರು ಶೋಧ ಕಾರ್ಯವನ್ನು ಮುಂದುವರಿಸುತ್ತಿದ್ದಾರೆ.

ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ, ವಿಕ್ರಮ್ ಅಮಟೆ ತಿಳಿಸಿದ್ದಾರೆ, ಹತ್ಯೆಯ ಸ್ಥಳದಲ್ಲಿ ಸೋಕೋ ತಂಡ ಪರಿಶೀಲನೆ ನಡೆಸಿದ್ದು, ಆರೋಪಿಯು ಯಾರು ಎಂದು ಗೊತ್ತಾಗಿದ್ದು, ಬಂಧನದ ನಂತರ ಕೊಲೆಗೆ ಸಂಬಂಧಿಸಿದ ವಿವರಗಳು ಬಹಿರಂಗಗೊಳ್ಳಲಿವೆ.

Comments (0)

Your email address will not be published. Required fields are marked *

Back to top button