ಜಿಲ್ಲೆರಾಜ್ಯಸುದ್ದಿ

ಟ್ರಾಫಿಕ್ ನಿಯಮ ಉಲ್ಲಂಘನೆ: ಇಡೀ ದಿನ ರಸ್ತೆ ಮಧ್ಯೆ ಬೋರ್ಡ್ ಹಿಡಿದು ನಿಲ್ಲುವ ಶಿಕ್ಷೆ ..!

ಚಿಕ್ಕಮಗಳೂರು: ಕಡೂರು ಪಟ್ಟಣದ ಬಿಸಿಲೇಹಳ್ಳಿ ಗ್ರಾಮದ ರಂಜಿತ್‌ ಎಂಬ ವ್ಯಕ್ತಿ ಹೆಲ್ಮೆಟ್ ಧರಿಸದೆ, ಒನ್-ವೇ ರೈಡಿಂಗ್ ಹಾಗೂ ಡ್ರಿಂಕ್ & ಡ್ರೈವ್ ಮಾಡುವಂತಹ ಹಲವು ಟ್ರಾಫಿಕ್ ನಿಯಮ ಉಲ್ಲಂಘನೆಗಳನ್ನು ಮಾಡಿದ್ದ ಹಿನ್ನೆಲೆ ಚಿಕ್ಕಮಗಳೂರು ನ್ಯಾಯಾಲಯ ಅದಕ್ಕೆ ವಿಭಿನ್ನ ಶಿಕ್ಷೆ ವಿಧಿಸಿದೆ.

ನ್ಯಾಯಾಲಯದ ಆದೇಶದಂತೆ, ರಂಜಿತ್‌ ಈ ದಿನ ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ಕಡೂರು ಪಟ್ಟಣದ ಮಲ್ಲೇಶ್ವರ ಸರ್ಕಲ್‌ನಲ್ಲಿ ಬೋರ್ಡ್ ಹಿಡಿದು ನಿಂತಿದ್ದ. ಈ ವೇಳೆ ಪೊಲೀಸರೊಬ್ಬರನ್ನು ನಿಯೋಜಿಸಿ ತಪ್ಪಿತಸ್ಥನು ಕಾನೂನು ಪಾಲನೆ ಮಾಡುತ್ತಾನೋ ಎಂದು ಗಮನಿಸಬೇಕೆಂದು ಸೂಚನೆ ನೀಡಲಾಗಿತ್ತು. ದಿನದ ಶಿಕ್ಷೆ ಪೂರ್ಣಗೊಂಡ ನಂತರ ಪೊಲೀಸ್ ಅಧಿಕಾರಿಗಳು ಕೋರ್ಟ್‌ಗೆ ವರದಿ ಸಲ್ಲಿಸಲು ಕೋರ್ಟ್ ಆದೇಶಿಸಿದ್ದು, ಈ ರೀತಿಯ ವಿಭಿನ್ನ ಶಿಕ್ಷೆಯ ಮೂಲಕ ಸಾರ್ವಜನಿಕರಿಗೆ ಟ್ರಾಫಿಕ್ ನಿಯಮ ಪಾಲನೆಯ ಮಹತ್ವವನ್ನು ತೋರಿಸಲು ಪ್ರಯತ್ನಿಸಲಾಗಿದೆ.

ಸಾರ್ವಜನಿಕರು ಈ ಕ್ರಮವನ್ನು ಮೆಚ್ಚಿಕೊಂಡಿದ್ದು, 500–1000 ರೂ. ದಂಡ ಬದಲು ಇಡೀ ದಿನ ನಿಂತು ಶಿಕ್ಷೆ ಭೋಗಿಸುವುದು, ನಿಯಮ ಉಲ್ಲಂಘನೆಯ ಬಗ್ಗೆ ಭಯವನ್ನೂ, ಜಾಗರೂಕತೆಯನ್ನೂ ಹೆಚ್ಚಿಸುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Comments (0)

Your email address will not be published. Required fields are marked *

Back to top button