
ಶಿವಮೊಗ್ಗದ: ಸೋಗಾನೆ ವಿಮಾನ ನಿಲ್ದಾಣದಿಂದ ಕಾರ್ಯನಿರ್ವಹಿಸುತ್ತಿದ್ದ ಪ್ರಮುಖ ವಿಮಾನಯಾನ ಸಂಸ್ಥೆ ಏಪ್ರಿಲ್ ಅಂತ್ಯಕ್ಕೆ ತನ್ನ ಸೇವೆಯನ್ನು ಸ್ಥಗಿತಗೊಳಿಸುವ ಮುನ್ಸೂಚನೆ ನೀಡಿದೆ. ಸದ್ಯದ ಮಾಹಿತಿ ಪ್ರಕಾರ, ಮೇ 1ರಿಂದ ಶಿವಮೊಗ್ಗದಿಂದ ಯಾವುದೇ ನಗರಗಳಿಗೆ ಟಿಕೆಟ್ ಬುಕ್ಕಿಂಗ್ ಲಭ್ಯವಿಲ್ಲದಿರುವುದು ಪ್ರಯಾಣಿಕರಲ್ಲಿ ಆತಂಕ ಮತ್ತು ಅಚ್ಚರಿ ಮೂಡಿಸಿದೆ.

ಸೇವೆ ಸ್ಥಗಿತಕ್ಕೆ ಪ್ರಮುಖ ಕಾರಣಗಳೇನು?
ಇಂಡಿಗೋ ಸಂಸ್ಥೆಯ ಈ ಹಠಾತ್ ನಿರ್ಧಾರದ ಹಿಂದೆ ತಾಂತ್ರಿಕ ಮತ್ತು ನಿಯಮಾವಳಿಗಳ ಬದಲಾವಣೆ ಇದೆ ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರಂತದ ನಂತರ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ನಿಯಮಗಳನ್ನು ಅತ್ಯಂತ ಕಠಿಣಗೊಳಿಸಿ ಪೈಲಟ್‌ಗಳ ಕೆಲಸದ ಅವಧಿ (FDTL) ಮತ್ತು ವಿಮಾನಗಳ ನಿರ್ವಹಣೆಗೆ ಸಂಬಂಧಿಸಿದ ಹೊಸ ಮಾರ್ಗಸೂಚಿಗಳಿಂದಾಗಿ ಸಂಸ್ಥೆಗೆ ಪೈಲಟ್‌ಗಳ ತೀವ್ರ ಕೊರತೆ ಎದುರಾಗಿದಪೈಲಟ್‌ಗಳ ಅಭಾವದಿಂದಾಗಿ ಇಂಡಿಗೋ ಸಂಸ್ಥೆಯು ಸಣ್ಣ ನಗರಗಳಿಗೆ ಸಂಪರ್ಕ ಕಲ್ಪಿಸುವ ತನ್ನ ATR ವಿಮಾನ ಸೇವೆಗಳನ್ನು ಕಡಿತಗೊಳಿಸಲು ನಿರ್ಧರಿಸಿದೆ ಎನ್ನಲಾಗಿದೆ.

ಶಿವಮೊಗ್ಗದಿಂದ ಬೆಂಗಳೂರು ಮತ್ತು ಹುಬ್ಬಳ್ಳಿ ಸೇರಿದಂತೆ ದೇಶದ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಈ ಸೇವೆ ಸ್ಥಗಿತಗೊಂಡರೆ, ಮಲೆನಾಡಿನ ಭಾಗದ ಪ್ರವಾಸೋದ್ಯಮ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆಯಿದೆ. ಈ ಬಗ್ಗೆ ಇಂಡಿಗೋ ಸಂಸ್ಥೆಯಿಂದ ಅಧಿಕೃತ ಸ್ಪಷ್ಟನೆಗಾಗಿ ಸಾರ್ವಜನಿಕರು ಕಾಯುತ್ತಿದ್ದಾರೆ.




