ಜಿಲ್ಲೆಹಣಕಾಸು

ನಾಡದೇವತೆ ಚಾಮುಂಡೇಶ್ವರಿ ಈಗ ‘ಗೃಹಲಕ್ಷ್ಮಿ’

ಮೈಸೂರು; ರಾಜ್ಯದ ಗ್ಯಾರಂಟಿ ಯೋಜನೆಗಳು ನೆರೆ ರಾಜ್ಯಗಳಲ್ಲೂ ಸದ್ದು ಮಾಡ್ತಿರೋ ಹೊತ್ತಲ್ಲಿ ನಾಡದೇವತೆ ಚಾಮುಂಡೇಶ್ವರಿಗೂ ಗ್ಯಾರಂಟಿ ಸ್ಕೀಂ ನ ಹಣ ಸಂದಾಯವಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಗೃಹಲಕ್ಷ್ಮಿ ಯೋಜನೆಯ 59 ತಿಂಗಳ ಹಣವನ್ನು ನಾಡದೇವತೆ ಚಾಮುಂಡೇಶ್ವರಿಗೆ ಅರ್ಪಿಸಿದರು.


ರಕ್ಷಾ ಬಂಧನದ ದಿನ ಮೈಸೂರಿನಲ್ಲಿ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿತ್ತು. ಆಗ ಚಾಮುಂಡೇಶ್ವರಿಗೆ 2000 ರೂ. ಅರ್ಪಿಸಲಾಗಿತ್ತು. ಹೀಗೆ ದೇವರನ್ನೂ ಯೋಜನೆಯ ಫಲಾನುಭವಿ ಎಂಬಂತೆ ಸಂಭ್ರಮಿಸಲಾಗಿತ್ತು. ಮನೆ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುವಂತೆ, ರಾಜ್ಯದ ಯಜಮಾನಿ ನಾಡದೇವತೆಗೆ 59 ತಿಂಗಳ ಒಟ್ಟು ಹಣ 1,18,000 ರೂ ಗಳನ್ನು ಸಂದಾಯ ಮಾಡಲಾಯಿತು. ಈ ಹಿಂದೆ ಪ್ರತಿ ತಿಂಗಳು ಚಾಮುಂಡಿ ದೇವಸ್ಥಾನಕ್ಕೆ ಯೋಜನೆಯ ಹಣ ನೀಡುವಂತೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್​ ಅವರಿಗೆ ಎಂಎಲ್​ಸಿ ದಿನೇಶ್ ಗೂಳಿಗೌಡ ಪತ್ರ ಬರೆದಿದ್ದರು. ಬಳಿಕ ಈ ಬಗ್ಗೆ ಕ್ರಮ ವಹಿಸುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಡಿಸಿಎಂ ಡಿಕೆ ಶಿವಕುಮಾರ್ ಸೂಚಿಸಿದ್ದರು. ಇದೀಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ವೈಯಕ್ತಿಕ ಹಣವನ್ನು ಗೃಹ ಲಕ್ಷ್ಮಿ ಯೋಜನೆ ಹೆಸರಲ್ಲಿ ತಾಯಿ ಚಾಮುಂಡೇಶ್ವರಿಗೆ ಅರ್ಪಿಸಿದರು.

Comments (0)

Your email address will not be published. Required fields are marked *

Back to top button