ಜಿಲ್ಲೆಧರ್ಮ

ಜನವರಿ 23 ರಿಂದ 48 ದಿನ ಅಯೋಧ್ಯೆಯಲ್ಲಿ ಬ್ರಹ್ಮ ಕಳಸೋತ್ಸವ ಕಾರ್ಯಕ್ರಮ.

 ರಾಯಚೂರು : ಅಯೋಧ್ಯ ರಾಮ ಜನ್ಮಭೂಮಿಯಲ್ಲಿ ಜನವರಿ 22 ರಂದು ಪ್ರಭು ಶ್ರೀರಾಮಚಂದ್ರನ ದೇವಾಲಯ ಲೋಕಾರ್ಪಣೆ ಹಿನ್ನಲೆ. ಜನವರಿ 23 ರಿಂದ 48 ದಿನ ಅಯೋಧ್ಯೆಯಲ್ಲಿ ಬ್ರಹ್ಮ ಕಳಸೋತ್ಸವ ಕಾರ್ಯಕ್ರಮ. ಇದೇ ವೇಳೆ 48 ದಿನಗಳ ಕಾಲ ರಾಮಮಂದಿರಲ್ಲಿ ವಿಶೇಷ ಮಂಡಲಪೂಜೆ.. ಈ ಹಿನ್ನಲೆಯಲ್ಲಿ ದೇಶದ ಸುಮಾರು 1500 ಕ್ಕೂ ವೈದಿಕ ಪಂಡಿತರ ಆಯ್ಕೆ ಮಂಡಲ ಪೂಜೆಗೆ ಆಯ್ಕೆಯಾದ ರಾಯಚೂರು ಜಿಲ್ಲೆಯ ಇಬ್ಬರು ವೈದಿಕ ಪಂಡಿತರು. ಲಿಂಗಸುಗೂರು ತಾಲೂಕಿನ ಗುರುಗುಂಟಾದ ಆದಯ್ಯಸ್ವಾಮಿ, ಹಾಗೂ ಮಸ್ಕಿ ತಾಲೂಕಿನ ಹಸಮಕಲ್ ನ ಶ್ರೀಧರಸ್ವಾಮಿ‌ ಆಯ್ಕೆ.

ಆನ್ ಲೈನ್ ಮೂಲಕ ವೈದಿಕ ಸೇವೆಗಾಗಿ ರಾಮಮಂದಿರ ಟ್ರಸ್ಟ್ ನಿಂದ ಕರೆದಿದ್ದ ಅರ್ಜಿ. ಋಗ್ವೇದ, ವೇದಾಧ್ಯಯನ, ಜ್ಯೋತಿಷ್ಯ ಶಾಸ್ತ್ರದಲ್ಲಿ ಪಾಂಡಿತ್ಯ ಪಡೆದವರಿಗಾಗಿ ಕರೆಯಲಾಗಿದ್ದ ಅರ್ಜಿ.. ಸಂದರ್ಶನದಲ್ಲಿ ಆಯ್ಕೆಯಾಗಿರುವ ಜಿಲ್ಲೆಯ ವೈದಿಕ ಪಂಡಿತರು. ಶ್ರೀರಾಮನ ಸಿಂಹಾಸನಾರೋಹಣಕ್ಕಾಗಿ ಯಾಗದ ವಿಧಿಗಳನ್ನು ನಡೆಸುವ ಹಾಗೂ ಮಂಡಲ ಪೂಜೆಯಲ್ಲಿ ಪಾಲ್ಗೊಳ್ಳುವ ವೈದಿಕ ಪಂಡಿತರು.

Comments (0)

Your email address will not be published. Required fields are marked *

Back to top button