Top Newsರಾಜಕೀಯಸುದ್ದಿ

ಕಾಂಗ್ರೆಸ್ ಗೊಂದಲಕ್ಕೆ ಶೀಘ್ರವೇ ಪೂರ್ಣವಿರಾಮ; ಖರ್ಗೆ ಭೇಟಿ ಬಳಿಕ ಸತೀಶ್ ಜಾರಕಿಹೊಳಿ ಹೇಳಿಕೆ!

ದೆಹಲಿ:ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದ ಶಾಸಕರ ತಂಡ ಭೇಟಿ ಮಾಡಿ, ಕರ್ನಾಟಕ ರಾಜಕಾರಣದ ಪ್ರಸಕ್ತ ಗೊಂದಲಗಳ ಕುರಿತು ಗಂಭೀರ ಚರ್ಚೆ ನಡೆಸಿದೆ.

ರಾಜ್ಯದಲ್ಲಿ ಪದೇ ಪದೇ ಸೃಷ್ಟಿಯಾಗುತ್ತಿರುವ ಅಧಿಕಾರದ ಹಂಚಿಕೆ ಹಾಗೂ ನಾಯಕತ್ವದ ಕುರಿತಾದ ಹೇಳಿಕೆಗಳಿಗೆ ಪೂರ್ಣವಿರಾಮ ಹಾಕಬೇಕು ಮತ್ತು ಈ ಸಮಸ್ಯೆಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು ಎಂದು ಜಾರಕಿಹೊಳಿ ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಖರ್ಗೆ ಅವರು, ಈಗಾಗಲೇ ಈ ಬಗ್ಗೆ ಒಂದು ತೀರ್ಮಾನಕ್ಕೆ ಬರಲಾಗಿದ್ದು, ಯಾವುದೇ ವಿಳಂಬವಿಲ್ಲದೆ ಶೀಘ್ರದಲ್ಲೇ ಗೊಂದಲಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಈ ನಿರ್ಣಾಯಕ ಭೇಟಿಯು ರಾಜ್ಯ ಕಾಂಗ್ರೆಸ್‌ನಲ್ಲಿನ ಆಂತರಿಕ ಭಿನ್ನಮತ ಶಮನಕ್ಕೆ ದಾರಿಯಾಗಲಿದೆಯೇ ಎಂಬ ಕುತೂಹಲ ಮೂಡಿಸಿದೆ.

Comments (0)

Your email address will not be published. Required fields are marked *

Back to top button