ರಾಜ್ಯಸುದ್ದಿ

ವಿಜಯಪುರದ ದೇಶಪ್ರೇಮಿ ಇಂಚಗೇರಿ ಮಠಕ್ಕೆ ವಿದೇಶಿಗರ ಭೇಟಿ..!

ವಿಜಯಪುರ : ಉತ್ತರ ಕರ್ನಾಟಕ ಭಾಗದಲ್ಲಿ ಸ್ವಾತಂತ್ರ್ಯ ಹೋರಾಟದ ದಿಕ್ಕನ್ನೆ ಬದಲಿಸಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ವಿಜಯಪುರ ಜಿಲ್ಲೆಯ ಇಂಚಗೇರಿ ಮಠಕ್ಕೆ ವಿದೇಶಿಗರು ಭೇಟಿ ನೀಡಿದ್ದಾರೆ. ಕೇವಲ ಭೇಟಿ ನೀಡೋದು ಅಷ್ಟೆ ಅಲ್ಲದೆ, ಇಂಚಗೇರಿ ಮಠದ ಆರತಿ ಪದಗಳನ್ನ ಕನ್ನಡ, ಮರಾಠೀ ಭಾಷೆಯಲ್ಲಿ ಹಾಡುವ ಮೂಲಕ ಗಮನ ಸೆಳೆದಿದ್ದಾರೆ.

ಕೆನಡಾ, ಅಮೇರಿಕಾ ದೇಶದ ೪ ಪ್ರಜೆಗಳು ಮಠಕ್ಕೆ ಭೇಟಿ ನೀಡಿ, ಗುರುಗಳ ಗದ್ದುಗೆಗಳ ಎದುರು ಪ್ರಾರ್ಥನೆ ಸಲ್ಲಿಸಿದ್ದಾರೆ. ಇನ್ನು ಜಪಾನ್‌, ಇಂಗ್ಲೆಂಡ್‌, ರಷ್ಯಾ, ಜರ್ಮನ್‌ ಸೇರಿದಂತೆ ಅನೇಕ ದೇಶಗಳ ಅಲ್ಲಿನ ಪ್ರಜೆಗಳು ಇಂಚಗೇರಿ ಸಾಂಪ್ರದಾಯದ ತತ್ವಾದರ್ಶ ಮೆಚ್ಚಿ ಮಠದ ಶಿಷ್ಯರಾಗಿದ್ದಾರೆ. ಈ ಹಿಂದೆ ಮಠದಲ್ಲಿ ಗುರುಗಳಾಗಿದ್ದ ರನಜೀತ್‌ ಮಹಾರಾಜರು ಹಾಗೂ ಗುರುಪುತ್ರೇಶ್ವರ ಮಹಾರಾಜರು ವಿದೇಶಗಳಿಗೆ ತೆರಳಿ ಭಕ್ತಿ ಪ್ರಚಾರ ಮಾಡಿದ್ದರು. ಅಂದು ಮಠಕ್ಕೆ ಶಿಷ್ಯತ್ವ ಸ್ವೀಕರಿಸಿದ ಅನೇಕ ಭಕ್ತರ ಕುಟುಂಬಗಳು ಇಂದಿಗೂ ಇಂಚಗೇರಿ ಮಠಕ್ಕೆ ಭೇಟಿ ನೀಡುತ್ತಿವೆ ಅನ್ನೋದು ವಿಶೇಷ..

Comments (0)

Your email address will not be published. Required fields are marked *

Back to top button