ರಾಜಕೀಯರಾಜ್ಯಸುದ್ದಿ

‘ವಿಬಿ ಜಿ ರಾಮ್‌ ಜಿ ‘ನಲ್ಲಿ ರಾಮನೂ ಇಲ್ಲ, ಸಿದ್ದರಾಮನೂ ಇಲ್ಲ;ಸಿಎಂ ಸಿದ್ದರಾಮಯ್ಯ ವ್ಯಂಗ್ಯ!

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸರ್ಕಾರದ ಹೊಸ ಯೋಜನೆ ‘ವಿಬಿ ಜಿ ರಾಮ್‌ ಜಿ’ ಹೆಸರಿನಲ್ಲಿ ರಾಮನಿಲ್ಲ ಎಂದು ವ್ಯಂಗ್ಯವಾಡುವ ಮೂಲಕ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಕೇಂದ್ರವು ಮನರೇಗಾ ಯೋಜನೆಯನ್ನು ರದ್ದುಪಡಿಸಿ ಅದರ ಬದಲಿಗೆ ಜಾರಿಗೆ ತಂದಿರುವ ಈ ಹೊಸ ಯೋಜನೆಯ ಹೆಸರನ್ನು ಪ್ರಸ್ತಾಪಿಸಿದ ಸಿಎಂ, ಇದರಲ್ಲಿ ದಶರಥ ರಾಮನೂ ಇಲ್ಲ, ಸೀತಾ ರಾಮನೂ ಇಲ್ಲ, ಅತ್ತ ರಾಮಾಯಣದ ರಾಮನೂ ಇಲ್ಲ ಅಥವಾ ಇತ್ತ ಸಿದ್ದರಾಮನೂ ಇಲ್ಲ ಎಂದು ಲೇವಡಿ ಮಾಡಿದರು. ತಮ್ಮ ಸಿದ್ಧಾಂತವನ್ನು ಸಮರ್ಥಿಸಿಕೊಂಡ ಸಿದ್ದರಾಮಯ್ಯ, “ನಮ್ಮ ಐಡಿಯಾಲಜಿ ನಮಗೆ, ನಿಮ್ಮದು ನಿಮಗೆ. ನೀವು ನಮ್ಮ ಸಿದ್ಧಾಂತವನ್ನು ಒಪ್ಪಬೇಕಿಲ್ಲ, ಆದರೆ ನಾವೆಲ್ಲರೂ ಸಂವಿಧಾನವನ್ನು ಒಪ್ಪಲೇಬೇಕು”., ರಾಜ್ಯಪಾಲರ ಭಾಷಣದ ವಿಚಾರದಲ್ಲಿ ತಮಗೆ ರಾಜ್ಯಪಾಲರ ವ್ಯಕ್ತಿತ್ವದ ಮೇಲೆ ಗೌರವವಿದೆ ಆದರೆ ಅವರ ಮೂಲಕ ಕೆಲಸ ಮಾಡಿಸುತ್ತಿರುವ ಕೇಂದ್ರ ಸರ್ಕಾರದ ಧೋರಣೆಗೆ ತಮ್ಮ ವಿರೋಧವಿದೆ ಎಂದು ಸ್ಪಷ್ಟಪಡಿಸಿದರು.

“2013ರ ಸಿದ್ದರಾಮಯ್ಯ ಈಗಿಲ್ಲ” ಎಂಬ ಸುನಿಲ್ ಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಶಾಸಕ ಸುನಿಲ್ ಕುಮಾರ್ ಅವರ ಟೀಕೆಗಳಿಗೂ ಸಿಎಂ ಖಡಕ್ ಉತ್ತರ ನೀಡಿದರು. “2013ರ ಸಿದ್ದರಾಮಯ್ಯ, ಇವತ್ತಿನ ಸಿದ್ದರಾಮಯ್ಯ ಮತ್ತು ಮುಂದಿನ ಸಿದ್ದರಾಮಯ್ಯ ಎಲ್ಲರೂ ಒಂದೇ. ಈ ಸಿದ್ದರಾಮಯ್ಯ ಬದಲಾಗಲು ಸಾಧ್ಯವಿಲ್ಲ” ಎಂದು ಗುಡುಗಿದರು.

ರಾಜ್ಯಪಾಲರ ಭಾಷಣದ ಅಸಮಾಧಾನ ಮತ್ತು ಕೇಂದ್ರ ಸರ್ಕಾರದ ಹೊಸ ಯೋಜನೆಗಳ ಹೆಸರಿನ ಸುತ್ತ ನಡೆದ ಈ ಚರ್ಚೆ ಸದನದಲ್ಲಿ ಭಾರೀ ವಾಕ್ಸಮರಕ್ಕೆ ಕಾರಣವಾಯಿತು. ಒಟ್ಟಾರೆಯಾಗಿ, ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ನೀತಿಗಳನ್ನು ಟೀಕಿಸುವುದರ ಜೊತೆಗೆ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಪ್ರಯತ್ನ ಮಾಡಿದರು.

Comments (0)

Your email address will not be published. Required fields are marked *

Back to top button