ರಾಜ್ಯಸುದ್ದಿ

ಸಂಸದ ಅನಂತ ಕುಮಾರ್ ಹೆಗಡೆ ವಿರುದ್ದ ಕ್ರಮಕ್ಕೆ ಎನ್ಎಸ್ಯುಐಯಿಂದ ದೂರು

ಆನೇಕಲ್, ಜ. 16: ಕಳೆದ ಶನಿವಾರ ಸಂಸದ ಅನಂತಕಾರ್ ಹೆಗಡೆ ಸಿಎಂ ಸಿದ್ದರಾಮಯ್ಯರ ವಿರುದ್ದ ಏಕವಚನದಲ್ಲಿ ನಿಂದಿಸಿರುವ ಕುರಿತು ಬೇಷರತ್ ಕ್ಷಮೆ ಯಾಚಿಸಬೇಕು ಅಲ್ಲದೆ, ಸಂಸದರ ವಿರುದ್ದ ದೂರು ದಾಖಲಿಸಲೇ ಬೇಕೆಂದು ಪಟ್ಟು ಹಿಡಿದು ಕಾಂಗ್ರೆಸ್​ನ ಎನ್ಎಸ್ಯುಐ ರಾಜ್ಯ ಕಾರ್ಯದರ್ಶಿ ಆನೇಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.


ಅನಂತ ಕುಮಾರ್ ಹೆಗಡೆ ಪದೆ ಪದೇ ಕೆಣಕುವ ಮಾತುಗಳನ್ನ ನಿಲ್ಲಿಸಬೇಕು, ಪ್ರತಿ ವ್ಯಕ್ತಿಯ ಕುರಿತು ಮಾತನಾಡುವ ಮುನ್ನ ಗೌರವ ಸೂಚಿಸುವ ಸಂಸ್ಕೃತಿ ಕಲಿಯಬೇಕೆಂದು ಮಿಥುನ್ ಜಿ ಮನವಿಯಲ್ಲಿ ಕೋರಿದ್ದಾರೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಪಿ ಚಂದ್ರಪ್ಪ ದೂರು ಸ್ವೀಕರಿಸಿದ್ದು ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

Comments (0)

Your email address will not be published. Required fields are marked *

Back to top button