ರಾಜಕೀಯರಾಜ್ಯಸುದ್ದಿ

ನಿಗಮ ಮಂಡಳಿಗಳಿಗೆ ನನ್ನನ್ನು ಪರಿಗಣಿಸಬೇಡಿ ; ಶಾಸಕ ಬಿಜಿ ಗೋವಿಂದಪ್ಪ

ಚಿತ್ರದುರ್ಗ : ನಿಗಮ ಮಂಡಳಿಗಳಿಗೆ ನನ್ನನ್ನು ಪರಿಗಣಿಸಬೇಡಿ ಎಂದು ಸಿಎಂ ಹಾಗೂ ಪಕ್ಷದ ವರಿಷ್ಠರಿಗೆ ತಿಳಿಸಿದ್ದೇನೆ ಎಂದು ಹೊಸದುರ್ಗದ ಹಿರಿಯ ಶಾಸಕ ಬಿಜಿ ಗೋವಿಂದಪ್ಪ ಹೇಳಿದರು.


ಕಾಂಗ್ರೆಸ್ ಸರ್ಕಾರದಲ್ಲಿ ನಿಗಮ ಮಂಡಳಿಗಳಿಗೆ ಶಾಸಕರುಗಳನ್ನು ನೇಮಕ ಮಾಡಲು ಹಿರಿಯ ಕಿರಿಯ ಶಾಸಕರುಗಳ ಹೆಸರುಗಳನ್ನು ಪಟ್ಟಿ ಮಾಡಿ ಈಗಾಗಲೇ ಕೆಪಿಸಿಸಿ ಹೈ ಕಮಾಂಡ್ ಗೆ ರವಾನಿಸಿದೆ. ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಅತ್ಯಂತ ಹಿರಿಯ ಶಾಸಕರಾದ ಬಿಜಿ ಗೋವಿಂದಪ್ಪ ಹೆಸರು ಇದೆ. ಆದರೆ ನಾನು  ಮೊದಲೇ ನನಗೆ ನಿಗಮ ಮಂಡಳಿ ನೇಮಕ ಬೇಡ ಎಂದು ತಿಳಿಸಿದ್ದೇನೆ. ನನಗೆ ಆಸಕ್ತಿ ಇಲ್ಲ ಎಂದಿದ್ದಾರೆ. ಹೊಸದುರ್ಗ ಕ್ಷೇತ್ರವನ್ನು ಪ್ರತಿನಿಧಿಸುವ ಗೋವಿಂದಪ್ಪ ಸೋಲುಗೆಲುವನ್ನು ಖಂಡಿದ್ದಾರೆ. ಹಿರಿಯನಾದರೂ ಕೂಡ ಸಚಿವ ಸ್ಥಾನಕ್ಕೆ ಪರಿಗಣಿಸಲಿಲ್ಲ ಎಂಬ ನೋವಿದ್ದರೂ ಕೂಡ ಹೊರಗೆ ತೋರಿಸಿಕೊಳ್ಳದಿರುವ ಬಿಜಿ ಗೋವಿಂದಪ್ಪ ಅವರು ನಿಗಮ ಮಂಡಳಿಗಳಿಗೆ ನನ್ನ ಹೆಸರು ಕಳುಹಿಸಲಾಗಿದೆ. ಆದರೆ ನಾನು ಬೇಡವೆಂದು ಹೇಳಿದ್ದೇನೆ. ಸಿಎಂ ಸಿದ್ದರಾಮಯ್ಯ ಅವರೇನು ಹೇಳುತ್ತಾರೆ ನೋಡೋಣ ಅವರೇಳಿದಂತೆ ಕೇಳಬೇಕಲ್ವ ಎಂದು ಸಿಎಂ ಮೇಲೆ ಭಾರವನ್ನು ಹಾಕಿದರು. ಜಿಲ್ಲೆಯಲ್ಲಿ ಚಳ್ಳಕೆರೆ ಶಾಸಕ ರಘುಮೂರ್ತಿ ಕೂಡ ನಿಗಮ ಮಂಡಳಿ ನನಗೆ ಬೇಡ ಎಂದು ತಿರಸ್ಕರಿದ್ದು, ಜಿಲ್ಲೆಯ ಹಿರಿಯ ಶಾಸಕರುಗಳ ಮನವೊಲಿಸಲು ಸಿಎಂ ಮತ್ತು ಡಿಸಿಎಂ ಇಬ್ಬರು ಮುಂದಾಗುವರೇ ಎಂದು ಕಾದು ನೋಡಬೇಕಿದೆ.

Comments (0)

Your email address will not be published. Required fields are marked *

Back to top button