ರಾಜಕೀಯರಾಜ್ಯಸುದ್ದಿ

ಕೋಲಾರ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಡಾ. ವೇಣುಗೋಪಾಲ ನೇಮಕ

ಕೋಲಾರ : ಬಿಜೆಪಿ ಪಕ್ಷದಿಂದ ಕರ್ನಾಟಕದಾದ್ಯಂತ ಎಲ್ಲಾ ಜಿಲ್ಲೆಗಳಿಗೂ ಜಿಲ್ಲಾಧ್ಯಕ್ಷಕರನ್ನು ನೇಮಕ ಮಾಡಲಾಗಿದ್ದು ಕೋಲಾರ ಜಿಲ್ಲೆಗೆ ಡಾ. ವೇಣುಗೋಪಾಲರನ್ನು ಎರಡನೇ ಅವಧಿಗೆ ಅಧ್ಯಕ್ಷರನ್ನಾಗಿ ಮುಂದುವರಿಸಿ ಬಿಜೆಪಿ ರಾಜ್ಯಾದ್ಯಕ್ಷ ವಿಜಯೇಂದ್ರ ಆದೇಶ ಹೊರ ಪಡಿಸಿದ್ದಾರೆ.

ಸಂಸದ ಎಸ್ ಮುನಿಸ್ವಾಮಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ವೃತ್ತಿಯಲ್ಲಿ ವೈದ್ಯರಾದ ಡಾ. ವೇಣುಗೋಪಾಲ್ ಶ್ರೀನಿವಾಸಪುರದವರಾಗಿದ್ದು, 2018 ರ ವಿದಾನಸಭೆ ಚುನಾವಣೆಯಲ್ಲಿ ಮಾಜಿ ಸ್ವೀಕರ್ ರಮೇಶ್ ಕುಮಾರ್ ವಿರುದ್ದ ಬಿಜೆಪಿ ಇಂದ ನಿಂತು ಪರಾಭವಗೊಂಡಿದ್ದರು. ಇನ್ನು ವೇಣುಗೋಪಾಲ್ ಮೊದಲಬಾರಿ ಆಯ್ಕೆಯಲ್ಲಿ ಬಿಜೆಪಿ ಮುಖಂಡರಿಂದ ಸಾಕಷ್ಟು ವಿರೋಧಗಳು ಕೇಳಿಬಂದರೂ ಸಂಸದ ಮುನಿಸ್ವಾಮಿ ಬೆಂಬಲದಿಂದ ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ ಮುಂದುವರೆದಿದ್ದರು. ಈಗ ಎರಡನೇ ಬಾರಿ ಗೂ ಅವರನ್ನೆ ಅದ್ಯಕ್ಷರನ್ನಾಗಿ ಮುಂದುವರಿಸಿದ್ದು ಹಲವಾರು ಆಕಾಂಕ್ಷಿಗಳ ಸಿಟ್ಟಿಗೆ ಕಾರಣವಾಗಿದೆ.

 

Comments (0)

Your email address will not be published. Required fields are marked *

Back to top button