ರಾಜಕೀಯರಾಜ್ಯಸುದ್ದಿ

ಸಿದ್ದರಾಮಯ್ಯನವರೇ 5 ವರ್ಷವೂ ಸಿಎಂ ಎಂದು ಘೋಷಿಸಲು ಅಹಿಂದ ಸಂಘಟನೆಗಳಿಂದ ಪತ್ರ ಚಳುವಳಿ

ಮೈಸೂರು: ಪವರ್​ ಶೇರಿಂಗ್​ ಪ್ರಸ್ತಾಪಗಳು ಕಾಂಗ್ರೆಸ್​​ನಲ್ಲಿ ಕೋಲಾಹಲ ಸೃಷ್ಟಿಸಿವೆ.. ಕಾಂಗ್ರೆಸ್​ ಪಕ್ಷದ ಒಳಗೊಳಗೆ ಭಾರೀ ಲೆಕ್ಕಾಚಾರಗಳು ನಡೀತಿದೆ ಎಂಬು ಸುದ್ದಿ ಹರಿದಾಡುತ್ತಿದ್ದು, ಇದೀಗ ಅಹಿಂದ ಸಂಘಟನೆಗಳು ಹೊಸ ಪತ್ರ ಚಳುವಳಿ ಶುರು ಮಾಡಿದೆ..

ಸಿದ್ದರಾಮಯ್ಯ ಅವರನ್ನೇ 5 ವರ್ಷವೂ ಸಿಎಂ ಎಂದು ಘೋಷಣೆ ಮಾಡಿ, ಮೈಸೂರಿನ ಅಹಿಂದ ಸಂಘಟನೆಗಳು ಪತ್ರ ಚಳುವಳಿ ಶುರು ಮಾಡಿದೆ. ರಾಹುಲ್​ ಗಾಂಧಿಗೆ ಪತ್ರ ಬರೆಯಲಿರುವ ಅಹಿಂದ ಸಂಘಟನೆಗಳು ಪತ್ರ ಚಳುವಳಿ ಶುರು ಮಾಡಿದೆ.

ರಾಜ್ಯದಲ್ಲಿ ಮೂಡಿರುವ ಮುಂದಿನ ಮುಖ್ಯಮಂತ್ರಿ ಗೊಂದಲಕ್ಕೆ ತೆರೆ ಎಳೆಯಬೇಕು ಎಂದು ಅಹಿಂದ ಸಂಘಟನೆಗಳು ಆಗ್ರಹಿಸಿದೆ. ಸಿದ್ದರಾಮಯ್ಯ ಅವರನ್ನೇ 5 ವರ್ಷವೂ ಸಿಎಂ ಎಂದು ರಾಹುಲ್​ ಗಾಂಧಿಯವರೇ ಘೋಷಣೆ ಮಾಡ್ಬೇಕು ಎಂದು ಪತ್ರ ಚಳುವಳಿ ಮೂಲಕ ಮನವಿ ಮಾಡಿದ್ದಾರೆ.

Comments (0)

Your email address will not be published. Required fields are marked *

Back to top button