ಜಿಲ್ಲೆರಾಜ್ಯಸುದ್ದಿ

ಮದುವೆಯಾಗಿ ಮೂರು ಮಕ್ಕಳಿದ್ರೂ ಅಕ್ರಮ ಸಂಬಂಧ.. ಪ್ರಿಯಕರನ ಜತೆ ಎಸ್ಕೇಪ್!

ಬೆಂಗಳೂರು: ಪ್ರಿಯಕರನಿಗಾಗಿ ಮೂವರು ಮಕ್ಕಳ ತಾಯಿ ಮನೆ ಬಿಟ್ಟು ಹೋದ ಘಟನೆ ಬೆಂಗಳೂರಿನ ಬನ್ನೇರುಘಟ್ಟ ಸಮೀಪದ ಬಸವನಪುರ ಗ್ರಾಮದಲ್ಲಿ ನಡೆದಿದೆ.

11 ವರ್ಷದ ಹಿಂದೆ ಪ್ರೀತಿಸಿ ಮಂಜುನಾಥ್​​ ಎಂಬ ವ್ಯಕ್ತಿಯ ಜೊತೆ ಮದುವೆಯಾಗಿದ್ದ ಲೀಲಾವತಿ, ಇದೇ ಬಾನುವಾರ ಲವರ್​ ಗೋಸ್ಕರ ಮನೆ ಬಿಟ್ಟು ಹೋಗಿದ್ದಾರೆ.. ಈ ಹಿನ್ನೆಲೆ ಪತಿ ಮಂಜುನಾಥ್​ ಪತ್ನಿ ಲೀಲಾವತಿಯನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ..

ಪತಿ ಮಂಜುನಾಥ್​ ಕ್ಯಾಬ್ ಡ್ರೈವಿಂಗ್ ಕೆಲಸ ಮಾಡುತ್ತಿದ್ದು, ಗಂಡ ಮನೆಯಿಂದ ಹೊರಹೋಗ್ತಿದ್ದಂತೆ ಪ್ರಿಯಕರ ಸಂತೋಷ್ ಬರುತ್ತಿದ್ದ. ಇದರಿಂದ ಲೀಲಾವತಿ ನಡವಳಿಕೆಯಿಂದ ಅನುಮಾನಗೊಂಡಿದ್ದ ಮಂಜುನಾಥ್ ಭಾನುವಾರ ಕೆಲಸಕ್ಕೆ ಹೋಗೋದಾಗಿ ಹೇಳಿ ಹೋಗಿದ್ದ.ಆದ್ರೆ ಕೆಲಸಕ್ಕೆ ಹೋಗದೆ ಮಂಜುನಾಥ್ ಮನೆಯ ಸಮೀಪವೇ ಇದ್ದು. ಈ ವಿಷಯ ತಿಳಿಯದೆ ರಾತ್ರಿ ಲೀಲಾವತಿ ಪೋನ್ ಮಾಡಿ ಎಲ್ಲಿದ್ದೀಯ ಅಂತ ಮಂಜುನಾಥ್ನ ಕೇಳಿದ್ದು, HAL ಬಳಿ ಇದ್ದೀನಿ ಮಂಜುನಾಥ್ ಅಂತ ಹೇಳಿದ್ದಾನೆ. ಈ ವೇಳೆ ತಕ್ಷಣ ಪ್ರಿಯಕರ ಸಂತೋಷ್​ಗೆ ಪೋನ್ ಮಾಡಿ ಲೀಲಾವತಿ ಕರೆಸಿಕೊಂಡಿದ್ದಾಳೆ. ಇದೆ ವೇಳೆ ಪತಿ ಮಂಜುನಾಥ್ ಮನೆಗೆ ಎಂಟ್ರಿಕೊಟ್ಟದ್ದು, ಪತ್ನಿ ಕಳ್ಳಾಟ ಬಯಲಾಗಿದೆ.ಇದರಿಂದ ಕೋಪಗೊಂಡ ಮಂಜುನಾಥ ಗಲಾಟೆ ಮಾಡಿದ್ದಾನೆ..ಹೀಗಾಗಿ ಪುಟ್ಟ ಮಕ್ಕಳನ್ನ ಬಿಟ್ಟು ಲೀಲಾವತಿ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ.

Comments (0)

Your email address will not be published. Required fields are marked *

Back to top button