Top Newsರಾಜ್ಯವೆಬ್ ಸ್ಟೋರೀಸ್ಸಿನಿಮಾಸುದ್ದಿ

ಮೈಸೂರಿನಲ್ಲಿ ಪೆದ್ದಿ ಚಿತ್ರದ ಶೂಟಿಂಗ್​​.. ಸಿಎಂ ಭೇಟಿ ಮಾಡಿದ ರಾಮ್​​ ಚರಣ್​​

ಮೈಸೂರು: ತೆಲುಗು ಸ್ಟಾರ್​ ನಟ ರಾಮ್​ ಚರಣ್​​ ಸಿಎಂ ಸಿದ್ದರಾಮಯ್ಯ ಅವರನ್ನ ಮೈಸೂರಿನ ನಿವಾಸದಲ್ಲಿ ಭೇಟಿಯಾಗಿ ಗೌರವಿಸಿದರು. ಮೈಸೂರಿನಲ್ಲಿ ‘ಪೆದ್ದಿ’ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿರುವ ನಟ ರಾಮ್‌ ಚರಣ್, ಮೈಸೂರು ನಿವಾಸದಲ್ಲಿ ಸಿಎಂ ಭೇಟಿಯಾದರು. ಸಿದ್ದರಾಮಯ್ಯಗೆ ಶಾಲು ಹೊದಿಸಿ, ಹೂವಿನ ಹಾರ ಹಾಕಿ ನಟ ಗೌರವಿಸಿದರು. ಈ ವೇಳೆ ಸಚಿವ ಸಂತೋಷ್‌ ಲಾಡ್‌, ಸಿಎಂ ಪುತ್ರ ಹಾಗೂ ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಕೂಡ ಇದ್ದರು.

ರಾಮ್ ಚರಣ್ ನಾಯಕನಾಗಿ ಅಭಿನಯಿಸುತ್ತಿರುವ ಪೆದ್ದಿ ಚಿತ್ರೀಕರಣ ಮೈಸೂರಿನಲ್ಲಿ ಭರದಿಂದ ಸಾಗುತ್ತಿದೆ. ಅದ್ಧೂರಿ ಸೆಟ್ ಹಾಕಿ ಮಾಸ್ ಸಾಂಗ್‌ವೊಂದನ್ನು ಈಚೆಗೆ ಶೂಟಿಂಗ್ ನಡೆಸಲಾಗಿದೆ. 1,000 ಡ್ಯಾನ್ಸರ್ಸ್ ಜೊತೆ ಗ್ಲೋಬಲ್ ಸ್ಟಾರ್ ರಾಮ್ ಚರಣ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಖ್ಯಾತ ಡ್ಯಾನ್ಸ್ ಮಾಸ್ಟರ್ ಜಾನಿ ಈ ಹಾಡಿಗೆ ಕೊರಿಯೋಗ್ರಾಫ್‌ ಮಾಡಿದ್ದಾರೆ. ಬಹಳ ಅದ್ಧೂರಿಯಾಗಿ ದೊಡ್ಡ ಬಜೆಟ್‌ನಲ್ಲಿ ಈ ಸಾಂಗ್ ಚಿತ್ರೀಕರಣ ನಡೆಸಲಾಗಿದೆ. ಉಪ್ಪೇನ ನಿರ್ದೇಶಕ ಬುಚ್ಚಿಬಾಬು ಸನಾ ನಿರ್ದೇಶನ ಪೆದ್ದಿ ಸ್ಫೋರ್ಟ್ ಆಕ್ಷನ್ ಡ್ರಾಮಾ ಕಥಾಹಂದರ ಹೊಂದಿದೆ. ರಾಮ್ ಚರಣ್‌ಗೆ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ.

Comments (0)

Your email address will not be published. Required fields are marked *

Back to top button